ಬಜ್ಪೆ ವಿಮಾನ ದುರಂತಕ್ಕೆ ಇಂದಿಗೆ 12 ವರ್ಷ

ಬಜ್ಪೆ ವಿಮಾನ ದುರಂತಕ್ಕೆ ಇಂದಿಗೆ 12 ವರ್ಷ

ಬಜ್ಪೆ ವಿಮಾನ ದುರಂತಕ್ಕೆ ಇಂದಿಗೆ 12 ವರ್ಷ...


ವಿಮಾದಲ್ಲಿದ್ದ 158 ಜನ ಸುಟ್ಟು ಕರಕಲಾಗಿದ್ದರು
ಭಾರತೀಯ ವಿಮಾನಯಾನದ ಅತೀ ದೊಡ್ಡ ದುರಂತ : ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ನಡೆದ ವಿಮಾನ ದುರಂತಕ್ಕೆ ಇಂದಿಗೆ 12 ವರ್ಷ ಪೂರ್ಣಗೊಂಡಿದೆ. ಭಾರತೀಯ ವಿಮಾನಯಾನ ಇತಿಹಾಸದಲ್ಲಿ ನಡೆದ ಅತೀ ದೊಡ್ಡ ದುರಂತ ಎಂದು ಹೇಳಲಾಗುತ್ತಿದೆ.
ಮೇ 22 2010 ಬೆಳಗಿನ ಜಾವ 6-15 ಕ್ಕೆ ಮಂಗಳೂರಿಗರನ್ನು ಬೆಚ್ಚಿ ಬೀಳಿಸಿದ ದಿನ. ಇದೇ ದಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ವಿಮಾನ ದುರಂತ ಸಂಭವಿಸಿತ್ತು. ಪೈಲೆಟ್ ಸೇರಿದಂತೆ 158 ಜನ ಪ್ರಯಾಣಿಕರು ಮೃತಪಟ್ಟಿದ್ದರು. ಒಟ್ಟು 166 ಜನ ಪ್ರಯಾಣಿಸುತ್ತಿದ್ದರು ಅದರಲ್ಲಿ 8 ಜನ ಅದೃಷ್ಟವಶಾವತವಾಗಿ ಪ್ರಾಣಾಪಾಯದಿಂದ ಪಾರಾಗಿದ್ದರು.
ಘಟನೆ ನಡೆದದ್ದು ಹೇಗೆ
ದುಬೈನಿಂದ ಭಾರತೀಯ ಕಾಲ ಮಾನ ರಾತ್ರಿ ಸುಮಾರು 1-20 ಕ್ಕೆ ಏರ್ ಇಂಡಿಯಾ ವಿಮಾನ 168 ಪ್ರಯಾನಿಕರನ್ನು ಹೊತ್ತು ಮಂಗಳೂರಿಗೆ  ಹೊರಟಿತ್ತು. ಬೆಳಗಿನ ಜಾವ 6-15 ಕ್ಕೆ ಬಜ್ಪೆ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ಇಳಿಯಬೇಕಾಗಿತ್ತು. ಆದರೆ ರನ್ ವೇ ತುದಿಯಲ್ಲಿ ನಿಲ್ಲಬೇಕಾದ ವಿಮಾನ ಆಯ ತಪ್ಪಿ ಮುಂದಕ್ಕೆ ಚಲಿಸಿ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ 158 ಜನ ಸುಟ್ಟು ಕರಕಲಾಗಿದ್ದರು. 8 ಜನ ಯಮ ಕೂಪದಿಂದ ಪಾರಾಗಿದ್ದರು.