ಪ್ಯಾರಾಲಿಂಪಿಕ್ಸ್ನಲ್ಲಿ ಭಾರತಕ್ಕೆ ಮತ್ತೊಂದು ಪದಕ; ಹೈಜಂಪ್ನಲ್ಲಿ ಬೆಳ್ಳಿ ಗೆದ್ದ ನಿಶಾದ್ ಕುಮಾರ್
ಪ್ಯಾರಾಲಿಂಪಿಕ್ಸ್ನಲ್ಲಿ ಭಾರತಕ್ಕೆ ಮತ್ತೊಂದು ಪದಕ; ಹೈಜಂಪ್ನಲ್ಲಿ ಬೆಳ್ಳಿ ಗೆದ್ದ ನಿಶಾದ್ ಕುಮಾರ್
ಟೋಕಿಯೊ: ಟೋಕಿಯೊ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ನಿಶಾದ್ ಕುಮಾರ್ ಪುರುಷರ ಟಿ 47 ಎತ್ತರ ಜಿಗಿತದಲ್ಲಿ 2.06 ಮೀಟರ್ ಜಿಗಿದು ಭಾರತಕ್ಕೆ ಬೆಳ್ಳಿ ಪದಕ ಪದಕ ತಂದುಕೊಟ್ಟಿದ್ದಾರೆ. ಅವರು ತಮ್ಮ ಎರಡನೇ ಪ್ರಯತ್ನದಲ್ಲಿ ಈ ಸಾಧನೆ ಮಾಡಿದರು.
ಟೋಕಿಯೊ ಪ್ಯಾರಾ ಒಲಿಂಪಿಕ್ಸ್ -2020 ರಲ್ಲಿ ಭಾರತಕ್ಕೆ ಈ ಮೊದಲು ಭಾವಿನಾ ಪಟೇಲ್ ಟೇಬಲ್ ಟೆನ್ನಿಸ್‌ನಲ್ಲಿ ಬೆಳ್ಳಿ ಪದಕ ಪಡೆದಿದ್ದರು. ಈಗ ಹೈಜಂಪ್ ಆಟಗಾರ ನಿಶಾದ್ ಕುಮಾರ್ ಭಾರತಕ್ಕೆ ಬೆಳ್ಳಿ ಪದಕ ಗೆದ್ದಿದ್ದಾರೆ. ನಿಶಾದ್ ಕುಮಾರ್ ಪುರುಷರ ಟಿ 47 ಎತ್ತರ ಜಿಗಿತದಲ್ಲಿ 2.06 ಮೀಟರ್ ಜಿಗಿದು ಭಾರತಕ್ಕೆ ಪದಕ ಗೆದ್ದಿದ್ದಾರೆ. ನಿಶಾದ್ ತಮ್ಮ ಎರಡನೇ ಪ್ರಯತ್ನದಲ್ಲಿ ಈ ಜಿಗಿತದೊಂದಿಗೆ, ಅವರು ಏಷ್ಯನ್ ದಾಖಲೆಯನ್ನು ಸರಿಗಟ್ಟಿದರು. ಈ ಕ್ರೀಡಾಕೂಟದಲ್ಲಿ ಭಾರತಕ್ಕೆ ಇದು ಎರಡನೇ ಪದಕವಾಗಿದೆ.