ಪ್ರಧಾನಿ ಮೋದಿ ಜೊತೆಗಿನ ಪರೀಕ್ಷಾ ಪೇ ಚರ್ಚೆಗೆ ಕೋಟೆನಾಡಿನ ವಿದ್ಯಾರ್ಥಿ ಆಯ್ಕೆ

ಹೊಳಲ್ಕೆರೆ: ತಾ|ನ ಹನುಮಂತ ದೇವರಕಣಿವೆಯ ಅಲೆಮಾರಿ ಹಿಂದುಳಿದ ವರ್ಗಗಳ ಮೊರಾಜಿ ದೇಸಾಯಿ ವಸತಿ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಮಿಥುನ್ ಬಿ. ನಾಯ್ಕ್ ಜ.27ರಂದು ಪ್ರಧಾನಿ ಮೋದಿ ಅವರೊಂದಿಗೆ ನಡೆಯುವ ಪರೀಕ್ಷಾ ಪೇ ಚರ್ಚೆ ಸಂವಾದ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾನೆ. ಕೇಂದ್ರ, ವಿದ್ಯಾರ್ಥಿಗಳಿಂದ ನಿನಗೆ ಗೊತ್ತಿರುವ ಸ್ವಾತಂತ್ರ್ಯ ಹೋರಾಟಗಾರ ಎಂಬ ವಿಷಯದ ಬಗ್ಗೆ ಅಭಿಪ್ರಾಯ ಆಹ್ವಾನಿಸಿತ್ತು. 65,558 ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದರು. ಈ ಪೈಕಿ ಮಿಥುನ್ ಆಯ್ಕೆ ಆಗಿದ್ದಾರೆ.