ಉಕ್ರೇನ್ ಜತೆ ನಾವಿದ್ದೇವೆ ಎಂದು ಅಭಯ ನೀಡಿದ ಜೋ ಬೈಡನ್

ಉಕ್ರೇನ್ ಜತೆ ನಾವಿದ್ದೇವೆ ಎಂದು ಅಭಯ ನೀಡಿದ ಜೋ ಬೈಡನ್

ಉಕ್ರೇನ್ ಎಂದೂ ಒಂಟಿಯಲ್ಲ, ನಿಮ್ಮ ಜತೆ ನಾವಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಭರವಸೆ ನೀಡಿದ್ದಾರೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜತೆ ವೈಟ್​ ಹೌಸ್​ನಲ್ಲಿ ಮಾತನಾಡಿದ ಬೈಡನ್, ಉಕ್ರೇನ್ ಎಂದೂ ಏಕಾಂಗಿಯಲ್ಲ, ಅಮೆರಿಕವು ಉಕ್ರೇನ್​ನ ಪ್ರತಿ ಹೆಜ್ಜೆಯಲ್ಲೂ ಜತೆಯಾಗಿ ನಿಲ್ಲುತ್ತದೆ.ಅಮೆರಿಕದ ರಕ್ಷಣಾ ಇಲಾಖೆಯು ಉಕ್ರೇನ್‌ಗೆ 1.85 ಬಿಲಿಯನ್ ಅಮೆರಿಕನ್‌ ಡಾಲರ್‌ ಮೊತ್ತದ ಹೆಚ್ಚುವರಿ ಭದ್ರತಾ ನೆರವನ್ನು ಘೋಷಿಸಿದೆ ಎಂದರು.