ವಿಶ್ವ ರೇಬೀಸ್ ದಿನಾಚರಣೆಗೆ ಸಚಿವ ಪ್ರಭು ಚೌವ್ಹಾಣ ಚಾಲನೆ

ಬೀದರ್

ವಿಶ್ವ ರೇಬೀಸ್ ದಿನಾಚರಣೆ ಪ್ರಯುಕ್ತ ಗಡಿ ಜಿಲ್ಲೆಯ ಬೀದರ್‍ನಲ್ಲಿ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌವ್ಹಾಣ ಬೀದರ್ ನಗರದ ಒಲ್ಡ್ ಸಿಟಿ ಪಶುಪಾಲಿ ಕ್ಲಿನಿಕ್‍ನಲ್ಲಿ ಲಸಿಕಾ ಅಭಿಯಾನಕ್ಕೆ ಸಸಿಗೆ ನೀರೆಯುವ ಮೂಲಕ ಚಾಲನೆ ನೀಡಿದರು. ಇದೆ ಸಂಧರ್ಭದಲ್ಲಿ ಮಾತನಾಡಿ, ರಾಜ್ಯದ ಎಲ್ಲ ಪಶು ಆಸ್ಪತ್ರೆಗಳಲ್ಲಿ ಸೆ. 28 ರಿಂದ 30ರವರೆಗೆ ಉಚಿತವಾಗಿ ನಾಯಿಗಳಿಗೆ ಲಸಿಕೆ ನೀಡಲಾಗುವುದು. ಸಾರ್ವಜನಿಕರಿಗೆ ರೇಬಿಸ್ ರೋಗದ ಕುರಿತು ಅರಿವು ಮೂಡಿಸುವುದು ಮತ್ತು ಉಚಿತ ಲಸಿಕೆ ಹಾಕುವ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದರು.