ಚಂದ್ರಶೇಖರ ಸಾವು ಸಂಭವಿಸಿ ತಿಂಗಳಾದರೂ ಬಂದಿಲ್ಲ ಶವ ಪರೀಕ್ಷೆ ವರದಿ

ದಾವಣಗೆರೆ: ಅಕ್ಟೋಬರ್ 30 ರಂದು ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ ಕಾಣೆಯಾಗಿದ್ದು, ನವೆಂಬರ್ 3 ರ ಸಂಜೆ ರೆಣುಕಾಚಾರ್ಯ ಮನೆಯಿಂದ ಕೇವಲ ನಾಲ್ಕು ಕಿಲೋ ಮೀಟರ್ ದೂರದ ಕಡದಕಟ್ಟಿ ಬಳಿಯ ತುಂಗಾ ನಾಲೆಯಲ್ಲಿ ಚಂದ್ರಶೇಖರ್ ಶವ ಸಿಕ್ಕಿತ್ತು. ಈಗಾಗಲೇ ಈ ಪ್ರಕರಣ ಬೆಳಕಿಗೆ ಬಂದು ಒಂದು ತಿಂಗಳು ಮುಕ್ತಾಯವಾಗಿದೆ. ಆದರೂ ಈವರೆಗೆ ಶವ ಪರಿಕ್ಷೇ ವರದಿ ಬಂದಿಲ್ಲವೆಂದು ಶಾಸಕ ರೇಣುಕಾಚಾರ್ಯ ಅವರು ಹೇಳಿಕೊಂಡಿದ್ದಾರೆ