ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭಾರಿ ಶಬ್ಧದೊಂದಿಗೆ ಭೂಮಿ ಕಂಪಿಸಿದ ಅನುಭವ: ಆತಂಕದಿಂದ ರಾತ್ರಿಯೆಲ್ಲ ರಸ್ತೆಯಲ್ಲೇ ಕಾಲಕಳೆದ ಜನ

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಮಿ ಕಂಪಿಸಿದ ಅನುಭವವಾಗಿದೆ. ತಿಕೋಟಾ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಭಾರಿ ಶಬ್ದದೊಂದಿಗೆ ಭೂಮಿ ಕಂಪಿಸಿದೆ.
ಕಳ್ಳಕವಟಗಿ, ಘೋಣಸಗಿ, ಟಕ್ಕಳಕಿ, ಹುಬನೂರು ಸೇರಿದಂತೆ ತಿಕೋಟಾ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಭಾರಿ ಶಬ್ದ ಕೇಳಿ ಬಂದಿದ್ದು, ನಡುರಾತ್ರಿ ಮಲಗದೆ ಹಲವು ಗ್ರಾಮಗಳ ಜನರ ರಸ್ತೆ ಬದಿ ಕುಳಿತು ಕಾಲ ಕಳೆದಿದ್ದಾರೆ.