ಉಸ್ತುವಾರಿ ಸಚಿವರ ಕಚೇರಿಗೆ ಬೀಗ ಹಾಕಲು ಯತ್ನಿಸಿದ ರೈತರ ಬಂಧನ | Bidar |

ಕಬ್ಬಿಗೆ ಬೆಂಬಲ ಬೆಲೆ ಆಗ್ರಹಿಸಿ ಕಳೆದ 18 ದಿನಗಳಿಂದ ನಡೆಯುತ್ತಿದ್ದ ಅಹೋ ರಾತ್ರಿ ಧರಣಿಗೆ ಸಚಿವ ಪ್ರಭು ಚೌವ್ಹಾಣ್ ಸ್ಪಂದಿಸದ ಹಿನ್ನಲೆ ಉಸ್ತುವಾರಿ ಸಚಿವರ ಕಚೇರಿಗೆ ಬೀಗ ಹಾಕಲು ಯತ್ನಿಸಿದ ರೈತರನ್ನು ಬಂಧಿಸಲಾಯಿತು. ಈ ಹಿಂದೆ ನಡೆದ ಸಭೆಯಲ್ಲಿ ಪ್ರತಿ ಟನ್ ಗೆ 2400 ರೂ ನಿಗದಿ ಮಾಡಲಾಗಿತ್ತು. ಈ ಬೇಡಿಕೆ ಈಡೇರದ ಕಾರಣ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಈ ವೇಳೆ ರೈತರು ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಆಗ ಪೊಲೀಸ ಮಾತಿಗೆ ಒಪ್ಪದ ರೈತರನ್ನು ಪೊಲೀಸರು ವಶಕ್ಕೆ ಪಡೆದರು.