PRO KABADDI 2022: ಡೆಲ್ಲಿ ವಿರುದ್ಧ ಗೆದ್ದ ಪುನೇರಿ

PRO KABADDI 2022: ಡೆಲ್ಲಿ ವಿರುದ್ಧ ಗೆದ್ದ ಪುನೇರಿ

ಹೈದರಾಬಾದ್: ಶನಿವಾರ ನಡೆದ ಪ್ರೊ ಕಬಡ್ಡಿ ಲೀಗ್ ನ ಮೊದಲ ಪಂದ್ಯದಲ್ಲಿ ಬಲಿಷ್ಠ ಪುನೇರಿ ಪಲ್ಟಾನ್ಸ್ 47-44 ಅಂಕಗಳಿಂದ ದಬಾಂಗ್ ಡೆಲ್ಲಿಯನ್ನು ಪರಾಭವಗೊಳಿಸಿ ಜಯದ ಹಾದಿಗೆ ಮರಳಿದೆ. ಪುನೇರಿ ಪರ ರೈಡರ್ ಆಕಾಶ್ ಶಿಂದೆ(16 ಅಂಕ) ಮತ್ತು ಪಂಕಜ್ ಮೊಹಿತೆ(11 ಅಂಕ)ಗಮನಾರ್ಹ ಪ್ರದರ್ಶನ ನೀಡಿದರು. ಡೆಲ್ಲಿ ಪರ ನಾಯಕ ನವೀನ್ ಕುಮಾರ್ ಅತ್ಯಧಿಕ 16 ಅಂಕ ಮತ್ತು ರೈಡರ್ ಅಶು ಮಲಿಕ್ 9 ಅಂಕ ಗಳಿಸಿ ಗಮನ ಸೆಳೆದರು.