ಆಂಬ್ಯುಲೆನ್ಸ್-ಟ್ರ್ಯಾಕ್ಟರ್ ಮಧ್ಯೆ ಅಪಘಾತ; ಸ್ಟ್ರೆಚರ್ನಲ್ಲಿದ್ದ ಗಾಯಾಳು ಕೆಳಗೆ ಬಿದ್ದು ಮೃತ್ಯು
ಬೆಳಗಾವಿ: ಆಂಬ್ಯುಲೆನ್ಸ್ ಹಾಗೂ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಮಧ್ಯೆ ಅಪಘಾತ ಸಂಭವಿಸಿ (Road accident) ಆಂಬ್ಯುಲೆನ್ಸ್ನಲ್ಲಿದ್ದ ಗಾಯಾಳು ಸ್ಟ್ರೆಚರ್ನಿಂದ ಬಿದ್ದು ಮೃತಪಟ್ಟಿದ್ದಾರೆ.
ಸವದತ್ತಿಯ ರೇಣುಕಾ ದೇವಸ್ಥಾನ ಆವರಣದಲ್ಲಿ ಬಳೆ ವ್ಯಾಪಾರಿ ಆಗಿರುವ ಅಕ್ಬರ್ ಸಾಬ್ (೨೮) ಅವರು ಬೆಳವಡಿಯಿಂದ ಸವದತ್ತಿಗೆ ಹೋಗುವಾಗ ಬೈಕ್ ಸ್ಕಿಡ್ ಆಗಿ ಗಾಯಗೊಂಡಿದ್ದರು.
ಅವರನ್ನು ಹೆಚ್ಚಿನ ಚಿಕಿತ್ಸೆಗೆ ಆಂಬ್ಯುಲೆನ್ಸ್ ಮೂಲಕ ಬೆಳಗಾವಿಗೆ ಕರೆದೊಯ್ಯಲಾಗುತ್ತಿದೆ.
ಈ ನಡುವೆ, ಬೈಲವಾಡದಲ್ಲಿ ಆಂಬ್ಯುಲೆನ್ಸ್ ಸಾಗುತ್ತಿದ್ದಾಗ ಟ್ರ್ಯಾಕ್ಟರ್ ನಡುವೆ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಆಂಬ್ಯುಲೆನ್ಸ್ನ ಸ್ಟ್ರೆಚರ್ ಮೇಲಿಂದ ಬಿದ್ದು ಸಾವು ಅಕ್ಬರ್ ಸಾಬ್ ಪ್ರಾಣ ಕಳೆದುಕೊಂಡಿದ್ದಾರೆ.
ಅಪಘಾತಕ್ಕೊಳಗಾದ ಆಂಬ್ಯುಲೆನ್ಸ್ಅಕ್ಬರ್ಸಾಬ್ ನೇಸರಗಿ ಅವರು ಬೆಳವಡಿ ಗ್ರಾಮದ ನಿವಾಸಿಯಾಗಿದ್ದು, ಅವರನ್ನು ಮೊದಲು ಸವದತ್ತಿ ತಾಲೂಕಾಸ್ಪತ್ರೆಗೆ ಕರೆದೊಯ್ಯಲಾಇತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಆಯಂಬುಲೆನ್ಸ್ ಮೂಲಕ ಬೆಳಗಾವಿ ಜಿಲ್ಲಾಸ್ಪತ್ರೆಗೆ ಬರುತ್ತಿದ್ದರು.
ಅಕ್ಬರ್ ಸಾಬ್ ಅವರ ತಾಯಿ ಜನ್ನತಬಿ ನೇಸರಗಿ (45), ಸಹೋದರರಾದ ಮೆಹಬೂಬ್ (28), ಶಬೀರ್ (22) ಗಂಭೀರ ಗಾಯಗೊಂಡಿದ್ದಾರೆ. ಆಂಬ್ಯುಲೆನ್ಸ್ ಚಾಲಕನಿಗೂ ಗಾಯವಾಗಿದ್ದು ಬೈಲಹೊಂಗಲ ತಾಲ್ಲೂಕಾಸ್ಪತ್ರೆಗೆ ಸೇರಿಸಲಾಗಿದೆ.
ಬೈಲಹೊಂಗಲ ತಾಲೂಕಿನ ದೊಡವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : Bike Accident: ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬೈಕ್ ಡಿಕ್ಕಿಯಾಗಿ ಯುವತಿ ಸಾವು