ಅಕ್ರಮ ಸಂಬಂಧಕ್ಕೆ ತಿರುಗಿದ ಸ್ನೇಹ : ಮೇಲಿನ ಮನೆಯ 'ಅಂಕಲ್' ಜೊತೆ ಕೆಳಮನೆಯ 'ಆಂಟಿ' ಪರಾರಿ..!

ಅಕ್ರಮ ಸಂಬಂಧಕ್ಕೆ ತಿರುಗಿದ ಸ್ನೇಹ : ಮೇಲಿನ ಮನೆಯ 'ಅಂಕಲ್' ಜೊತೆ ಕೆಳಮನೆಯ 'ಆಂಟಿ' ಪರಾರಿ..!

ಬೆಂಗಳೂರು : ಅಕ್ರಮ ಸಂಬಂಧದ ಹಿನ್ನೆಲೆ ಮೇಲಿನ ಮನೆಯ ಅಂಕಲ್ ಜೊತೆ ಕೆಳಮನೆಯ ಆಂಟಿ ಪರಾರಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಒಂದೇ ವಸತಿ ಕಟ್ಟಡದಲ್ಲಿ ನೆಲೆಸಿದ್ದ ವಿವಾಹಿತ ಪುರುಷ ಹಾಗೂ ವಿವಾಹಿತ ಮಹಿಳೆ ನಾಪತ್ತೆ ಆಗಿರುವ ಘಟನೆ ಜ್ಞಾನಭಾರತಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಅಕ್ರಮ ಸಂಬಂಧದ ಹಿನ್ನೆಲೆ ಇಬ್ಬರು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಮಾರುತಿನಗರದ ನವೀದ್ ಹಾಗೂ ಶಾಜಿಯಾ ಎಂಬುವವರು ಪರಾರಿಯಾದವರು.

ಏನಿದು ಘಟನೆ

ದ ಹಿಂದೆ ಮುಬಾರಕ್ ಹಾಗೂ ಶಾಜಿಯಾ ಎಂಬುವವರು ವಿವಾಹವಾಗಿದ್ದರು. ಮದುವೆಯಾದ ದಿನದಿಂದ ಸಂಸಾರ ಚೆನ್ನಾಗಿತ್ತು ಎನ್ನಲಾಗಿದೆ, ಆದರೆ ಬರುಬರುತ್ತಾ ಮೇಲಿನ ಮನೆಯ ಅಂಕಲ್ ಜೊತೆ ಕೆಳಮನೆಯ ಆಂಟಿ ಸ್ನೇಹ ಬೆಳೆಸಿದ್ದಾರೆ. ನವೀದ್ ಹಾಗೂ ಶಾಜಿಯಾ ನಡುವೆ ಪರಸ್ಪರ ಸ್ನೇಹ ಬೆಳೆದು, ಸ್ನೇಹ ಪ್ರೀತಿಗೆ ತಿರುಗಿ ನಂತರ ಅದ ಅಕ್ರಮ ಸಂಬಂಧಕ್ಕೆ ತಿರುಗಿದೆ. ನಂತರ ಮಾರುತಿನಗರದ ನವೀದ್ ಹಾಗೂ ಶಾಜಿಯಾ ಧಿಡೀರ್ ಆಗಿ ಕಣ್ಣೆರೆಯಾಗಿದ್ದು, ಈ ಬಗ್ಗೆ ಎರಡೂ ಕುಟುಂಬಗಳು ಪ್ರತ್ಯೇಕವಾಗಿ ದೂರು ದಾಖಲಿಸಿವೆ.

ಅಕ್ರಮ ಸಂಬಂಧ ಹಿನ್ನಲೆಯಲ್ಲಿ ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಡಿ.9 ರಂದು ನವೀದ್ ಹಾಗೂ ಶಾಜಿಯಾ ದಿಢೀರ್ ನಾಪತ್ತೆಯಾಗಿದ್ದು, ತನ್ನ ಪತ್ನಿ ಶಾಜಿಯಾ ಪುಟ್ಟ ಮಗುವನ್ನು ಕೂಡ ಕರೆದೊಯ್ದಿದ್ದಾಳೆ ಎಂದು ಪತಿ ಮುಬಾರಕ್ ಹೇಳಿದ್ದಾರೆ.