ಅದ್ದೂರಿಗಾಗಿ ಜರುಗಿದ ಸುಕ್ಷೇತ್ರ ಕಡತನಳ ಗ್ರಾಮದ ಶ್ರೀ ದುರದುಂಡೇಶ್ವರ ಜಾತ್ರಾ ಮಹೋತ್ಸವ | KITTUR |

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಸುಕ್ಷೇತ್ರ ಕಡತನಳ ಗ್ರಾಮದ ಶ್ರೀ ದುರದುಂಡೇಶ್ವರ ಜಾತ್ರಾ ಮಹೋತ್ಸವ ಹಾಗೂ ಮಹಾ ರಥೋತ್ಸವ ಕಾರ್ಯಕ್ರಮಗಳು ಅದ್ದೂರಿಯಾಗಿ ನೆರವೇರಿದವು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನ ಶ್ರೀ ಸಿದ್ದಸಂಸ್ಥಾನ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿಗಳು ವಹಿಸಿದ್ದರು, ದೊಳ್ಳು ಕುಣಿತ ಹಾಗೂ ವಿವಿಧ ಕಲಾಮೇಳಗಳೊಂದಿಗೆ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು. ಜಾತ್ರೋತ್ಸವದ ಅಂಗವಾಗಿ ಹಲವು ಜೋಡಿಗಳು ಸಾಮೂಹಿಕ ವಿವಾಹದಲ್ಲಿ ಹಸೆಮಣೆ ಏರುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟರು. ಮಹೋತ್ಸವದ ಅಂಗವಾಗಿ ಶ್ರೀಗಳ ಆಶಿರ್ವಜನವನ್ನ ನೀಡಿದರು.

ಜತೆಗೆ ಜಾತ್ರಾ ಮಹೋತ್ಸವ ಹಿನ್ನಲೇ ನೆರೆದವರ ಮನೋರಂಜನೆಗಾಗಿ ಜನಪ್ರಿಯ ಕಲಾವಿದ ನರೇಂದ್ರ ಬಸು ಅವರು ರಸಮಂಜರಿ ಕಾರ್ಯಕ್ರಮವನ್ನ ಸಹ ನಡೆಸಿಕೊಟ್ಟರು.