ನಾಳೆಯಿಂದ ಚುನಾವಣಾ ಬಾಂಡ್‌ಗಳ ಮಾರಾಟ

ನಾಳೆಯಿಂದ ಚುನಾವಣಾ ಬಾಂಡ್‌ಗಳ ಮಾರಾಟ

ವದೆಹಲಿ: ಗುಜರಾತ್‌ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ 23ನೇ ಕಂತಿನ ಚುನಾವಣಾ ಬಾಂಡ್‌ಗಳನ್ನು ವಿತರಿಸಲು ಕೇಂದ್ರ ಸರ್ಕಾರ ಸೋಮವಾರ ಅನುಮತಿ ನೀಡಿದೆ.

ನ.9ರಿಂದಲೇ ಬಾಂಡ್‌ ಮಾರಾಟ ಆರಂಭವಾಗಲಿದೆ. ರಾಜಕೀಯ ನಿಧಿ ಸಂಗ್ರಹದಲ್ಲಿ ಪಾರದರ್ಶಕತೆ ತರುವ ಪ್ರಯತ್ನಗಳ ಭಾಗವಾಗಿ ರಾಜಕೀಯ ಪಕ್ಷಗಳಿಗೆ ನೀಡುವ ನಗದು ದೇಣಿಗೆಗೆ ಪರ್ಯಾಯವಾಗಿ ಚುನಾವಣಾ ಬಾಂಡ್‌ಗಳನ್ನು ಮಾರಾಟ ಮಾಡಲಾಗುತ್ತದೆ.

23ನೇ ಕಂತಿನ ಚುನಾವಣಾ ಬಾಂಡ್‌ಗಳನ್ನು ವಿತರಿಸಲು ಎಸ್‌ಬಿಐಗೆ ಅಧಿಕಾರ ನೀಡಲಾಗಿದೆ. ನ.9ರಿಂದ ನ.15ರವರೆಗೆ ಎಸ್‌ಬಿಐನ ನಿಗದಿಪಡಿಸಿದ 29 ಶಾಖೆಗಳಲ್ಲಿ ಬಾಂಡ್‌ಗಳನ್ನು ಮಾರಾಟ ಮಾಡಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.