ಕಳೆದ 24 ಗಂಟೆಗಳಲ್ಲಿ ನನ್ನ ಮೇಲೆ 2 ಬಾರಿ ದಾಳಿ ಯತ್ನ: ಕೇಂದ್ರ ಸಚಿವ ಅಶ್ವಿನಿ ಚೌಬೆ ಆರೋಪ

ಕಳೆದ 24 ಗಂಟೆಗಳಲ್ಲಿ ನನ್ನ ಮೇಲೆ 2 ಬಾರಿ ದಾಳಿ ಯತ್ನ: ಕೇಂದ್ರ ಸಚಿವ ಅಶ್ವಿನಿ ಚೌಬೆ ಆರೋಪ

ಪಾಟ್ನಾ (ಬಿಹಾರ) : ಕಳೆದ 24 ಗಂಟೆಗಳಲ್ಲಿ ಬಕ್ಸರ್‌ನಲ್ಲಿ ನನ್ನ ಮೇಲೆ ಎರಡು ದಾಳಿಯ ಪ್ರಯತ್ನಗಳು ನಡೆದಿವೆ ಎಂದು ಕೇಂದ್ರ ರಾಜ್ಯ ಸಚಿವ (MoS) ಅಶ್ವಿನಿ ಚೌಬೆ (Ashwini Choubey) ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಶ್ವಿನಿ ಚೌಬೆ, 'ಬಕ್ಸರ್‌ನಲ್ಲಿ ನನ್ನ ಕಾರ್ಯಕ್ರಮದ ಸಮಯದಲ್ಲಿ, ರೈತರ ಮೇಲಿನ ದೌರ್ಜನ್ಯದ ವಿರುದ್ಧ ಒಂದು ದಿನದ ಉಪವಾಸದ ಸಮಯದಲ್ಲಿ, ನನ್ನಿಂದ ಕೇವಲ 5-6 ಅಡಿ ದೂರದಲ್ಲಿದ್ದ ಕೆಲವು ಕಿಡಿಗೇಡಿಗಳು ನನ್ನ ಮೇಲೇ ಕೋಲುಗನ್ನು ಬೀಸಲು ಯತ್ನಿಸಿದರು.

ಆದರೆ, ನನ್ನ ಅಂಗರಕ್ಷಕರು ಮತ್ತು ಪೊಲೀಸ್ ಸಿಬ್ಬಂದಿ ಮೂವರನ್ನು ಹಿಡಿದು ನನ್ನನ್ನು ಉಳಿಸಿದರು, ಅವರು ಅವರನ್ನು ಹಿಡಿಯದಿದ್ದರೆ ಆಗ ಏನಾಗುತ್ತಿತ್ತೋ ನನಗೆ ಗೊತ್ತಿಲ್ಲ.

ಅಷ್ಟೇ ಅಲ್ಲದೇ, ಒಬ್ಬ ವ್ಯಕ್ತಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಗಳ ಮಧ್ಯದಿಂದಲೇ ದೇಶ ನಿರ್ಮಿತ ಪಿಸ್ತೂಲ್ ಹಿಡಿದು ಓಡಿ ಹೋಗಿದ್ದಾನೆ. ಆಗ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು ಮತ್ತು ಅವರು ಏನನ್ನೂ ಮಾಡಲಿಲ್ಲ. ಈ ಬಗ್ಗೆ ಪೊಲೀಸ್ ಉಪ ನಿರೀಕ್ಷಕರು, ಉಪ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಎಲ್ಲಾ ಪದಾಧಿಕಾರಿಗಳಿಗೆ ಪತ್ರ ಬರೆದು ಘಟನೆಯ ಬಗ್ಗೆ ತಿಳಿಸಿದ್ದೇನೆ ಎಂದು ಹೇಳಿದರು.