ಆಟೋ-ಲಾರಿ ನಡುವೆ ಭೀಕರ ಅಪಘಾತ: ಎರಡೂವರೆ ವರ್ಷದ ಮಗು ಸೇರಿ ಮೂವರು ಸ್ಥಳದಲ್ಲೇ ಸಾವು

ಆಟೋ-ಲಾರಿ ನಡುವೆ ಭೀಕರ ಅಪಘಾತ: ಎರಡೂವರೆ ವರ್ಷದ ಮಗು ಸೇರಿ ಮೂವರು ಸ್ಥಳದಲ್ಲೇ ಸಾವು

ಯಾದಗಿರಿ: ಆಟೋ ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಎರಡೂವರೆ ತಿಂಗಳ ಮಗು ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟ ಧಾರುಣ ಘಟನೆ ‌ನಗರದ ಮುದ್ನಾಳ್ ಕ್ರಾಸ್ ಬಳಿ ಶುಕ್ರವಾರ ರಾತ್ರಿ ನಡೆದ ಘಟನೆ ಸಂಭವಿಸಿದೆ.

ಯಾದಗಿರಿ ತಾಲೂಕಿನ ಕಂಚಗಾರಹಳ್ಳಿ ತಾಂಡಾದ ಆಟೋ ಚಾಲಕ ಲಕ್ಷ್ಮಣ ಶಹಾಪುರ‌(26), ಹೋತಪೇಟ ತಾಂಡಾದ ನಿವಾಸಿ ಜಯರಾಜ್ ಚವ್ಹಾಣ್​(45) ಹಾಗೂ ಎರಡೂವರೆ ವರ್ಷದ ಕೃಷ್ಣ ಸಂತೋಷ ಮೃತ ದುರ್ದೈವಿಗಳು.

ಆಟೋದಲ್ಲಿ ಪ್ರಯಾಣಿಸುತ್ತಿದ್ದ 6 ಜನರ ಸ್ಥಿತಿ ಗಂಭೀರವಾಗಿದೆ.

ಮುಂಬೈನಿಂದ ರೈಲ್ವೆ ನಿಲ್ದಾಣಕ್ಕೆ ಬಂದಿಳಿದವರನ್ನ ಪ್ಯಾಸೆಂಜರ್​ ಆಟೋ ಚಾಲಕ ಊರಿಗೆ ಕರೆದೊಯ್ಯುತ್ತಿದ್ದ. ಇದೇ ವೇಳೆ ಕಲಬುರಗಿಯಿಂದ ಯಾದಗಿರಿಯತ್ತ ಕ್ವಾರಿ ಕಲ್ಲು ತುಂಬಿದ್ದ ಲಾರಿ ಬರುತ್ತಿತ್ತು. ಮಾರ್ಗಮಧ್ಯೆ ಮುದ್ನಾಳ್ ಕ್ರಾಸ್ ಬಳಿ ಆಟೋ ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾಗಿದ್ದು, ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ.