ಮತದಾರರ ಪಟ್ಟಿಯಲ್ಲಿ ಹೆಸರಿದೆಯೆಂದು ಹುಡುಕುವುದು ಹೇಗೆ? ಡಿಲೀಟ್ ಆಗಿದ್ದರೆ ಸೇರಿಸುವುದು ಹೇಗೆ?

ಬೆಂಗಳೂರಿನಲ್ಲಿ ; ಮತದಾರರ ಮಾಹಿತಿ ಕಳ್ಳತನ ಹಗರಣ ಬೆಳಕಿಗೆ ಬಂದ ನಂತರ ರಾಜ್ಯದಾದ್ಯಂತ ಹಲವಾರು ಕಡೆಗಳಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳು ಡಿಲೀಟ್ ಆಗಿರುವುದು ಬೆಳಕಿಗೆ ಬಂದಿದೆ. ಬೆಂಗಳೂರು ನಗರದಲ್ಲೆ ಸುಮಾರು 6 ಲಕ್ಷ ಮತದಾರರ ಹೆಸರು ಕಣ್ಮರೆಯಾಗಿದ್ದು ವರದಿಯಾಗಿದ್ದು, ತುಮಕೂರಿನಲ್ಲಿ 21 ಸಾವಿರ ಮತದಾರರ ಹೆಸರು ಡಿಲೀಟ್ ಮಾಡಲಾಗಿದೆ ಎಂದು ವರದಿಯಾಗಿದೆ. ಅದರಲ್ಲೂ ಮುಸ್ಲಿಂ ಮತ್ತು ದಲಿತ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಆರೋಪಿಸಲಾಗಿದೆ.
ಬೆಂಗಳೂರು ಬಿಬಿಎಂಪಿ ಚುನಾವಣೆ, ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಹಾಗೂ ವಿಧಾನಸಭಾ ಚುನಾವಣೆ ಮುಂದಿನ ಎಪ್ರಿಲ್-ಮೆ ಒಳಗಡೆ ನಡೆಯುತ್ತಿದೆ. ಈ ನಡುವೆ ಲಕ್ಷಾಂತರ ಮತದಾರರ ಹೆಸರುಗಳು ಕಣ್ಮರೆಯಾಗಿದ್ದು ಭಾರಿ ಆತಂಕ ಮೂಡಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಬದಲಾವಣೆಗೆ ಡಿಸೆಂಬರ್ 8ರವರೆಗೆ ಸಮಯವಾಕಾಶವಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಹೇಳಿದ್ದರು. ಹೀಗಾಗಿ ಅಲ್ಲಿವರೆಗೆ ನಿಮ್ಮ ಹೆಸರುಗಳನ್ನು ಮತ್ತೆ ಸೇರಿಸಬಹುದಾಗಿದೆ.