ಎಷ್ಟೇ ಖರ್ಚಾದ್ರೂ ಸರಿ ಸಿ.ಟಿ. ರವಿಯನ್ನು ಲಂಡನ್ಗೆ ಕಳಿಸ್ತೀವಿ! ಯುವ ಕಾಂಗ್ರೆಸ್ ನಾಯಕ ಬಿ.ವಿ.ಶ್ರೀನಿವಾಸ್

ಶಿವಮೊಗ್ಗ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವಿರುದ್ಧ ಹರಿಹಾಯ್ದಿರುವ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್, ಸಿ.ಟಿ.ರವಿ ಒಬ್ಬ ಅರೆಹುಚ್ಚ ಎಂದು ಜರಿದಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿ.ಟಿ.ರವಿ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ. ಹೀಗಾಗಿ ಗಾಂಧಿ ಪರಿವಾರ ಹಾಗೂ ನೆಹರೂ ಕುಟುಂಬದ ವಿರುದ್ಧ ಹೇಳಿಕೆ ನೀಡಿ ಬಿಜೆಪಿ ನಾಯಕರನ್ನು ಮೆಚ್ಚಿಸಿ, ಮಂತ್ರಿ ಸ್ಥಾನ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಹಾಗೂ ಆರ್ಎಸ್ಎಸ್ ಮೆಚ್ಚಿಸಲು ಸಿ.ಟಿ. ರವಿ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆಂದು ವಾಗ್ದಾಳಿ ನಡೆಸಿದರು.
ದೇಶದ ಮಾಜಿ ಪ್ರಧಾನಿಗಳಾದ ರಾಜೀವ್ ಗಾಂಧಿ ಹಾಗೂ ನೆಹರೂ ಅವರ ಬಗ್ಗೆ ಮಾತನಾಡುವ ಮೊದಲು ಅವರ ಬಗ್ಗೆ ತಿಳಿದುಕೊಳ್ಳಬೇಕು. ದೇಶಕ್ಕೆ ಈ ಇಬ್ಬರು ನಾಯಕರ ಕೊಡುಗೆಯಿದೆ. ಸಿ.ಟಿ.ರವಿ ಅವರಿಗೆ ಹುಚ್ಚು ಹಿಡಿದಿರುವುದು ಖಚಿತವಾಗಿದೆ. ಹೀಗಾಗಿ ನಮ್ಮ ಸ್ವಂತ ಖರ್ಚಿನಲ್ಲಿ ಸಿ.ಟಿ.ರವಿ ಅವರಿಗೆ ಲಂಡನ್ ಬ್ರಾಂಡ್ ಮೋರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹುಚ್ಚು ಹೋಗಿಸುತ್ತೇವೆ ಎಂದು ಬಿ.ವಿ.ಶ್ರೀನಿವಾಸ್ ಹೇಳಿದರು.