ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದೇ ಮದುವೆ ಸಮಾರಂಭದಲ್ಲಿ ಬಾಗಿಯಾಗಿದ್ದೇನೆ ಸಿಎಂ ಬೊಮ್ಮಾಯಿ. |Dharwad|
ಧಾರವಾಡದ ಡಾ.ವಿರೇಂದ್ರ ಹೆಗ್ಗಡೆ ಕಾಲಾ ಕ್ಷೇತ್ರವನ್ನು ಕಂಟೋನ್ಮೆಂಟ್ ಜೋನಿಂದ ಹೊರಗಡೆ ಇಡಲಾಗಿದೆ. ಮೇಲಾಗಿ ಮದುವೆ ಸಮಾರಂಭಕ್ಕೆ ಜಿಲ್ಲಾಧಿಕಾರಿಗಳಿಂದ ಪರವಾನಿಗೆ ಪಡೆದುಕೊಂಡೇ ಕುಟುಂಬಸ್ಥರು ಸಮಾರಂಭ ಮಾಡುತ್ತಿದ್ದಾರೆ. ಹಾಗಾಗಿ ಜಿಲ್ಲಾಧಿಕಾರಿಗಳಿಂದ ನಾನು ಸಹ ಮಾಹಿತಿ ಪಡೆದುಕೊಂಡೇ ಮದುವೆ ಸಮಾರಂಭದಲ್ಲಿ ಬಾಗಿಯಾಗಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು. ಧಾರವಾಡದ ಡಾ.ವಿರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿನ ಆತ್ಮೀಯರ ಮದುವೆ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕೋವಿಡ್ ರೂಲ್ಸ್ ಪ್ರಕಾರ ಮದುವೆ ಮಾಡಲೂ ಡಿಸಿ ಅವರು ಪರಮಿಶನ್ ಕೊಟ್ಟಿದ್ದಾರೆ. ಜೊತೆಗೆ ಎರಡು ಡೋಸ್ ಕಡ್ಡಾಯ ಮಾಡಿ, ನೂರು ಜನ ಭಾಗವಹಿಸಲು ಅವಕಾಶ ನೀಡಲಾಗಿದೆ. ಅದರಂತೆ ಕುಟುಂಬಸ್ಥರು ನಡೆದುಕೊಳ್ಳುತ್ತಿದ್ದಾರೆ. ಹಾಗಾಗಿ ಇಲ್ಲಿ ಕೊರೊನಾ ಯಾವುದೇ ರೂಲ್ಸ್ ವೈಲೆನ್ಸ್ ಆಗಿಲ್ಲ ಎಂದರು. ಬೆಳಗಾವಿ ಅಧಿವೇಶನಕ್ಕೆ ಕೊರೊನಾ ಅಡ್ಡಿ ಆಗುತ್ತಾ ಎಂಬ ಮಾಧ್ಯಮ ಪ್ರತಿನಿಧಿಗಳ ಒ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಅದರ ಕುರಿತು ಯಾವುದೇ ಚಿಂತನೆ ಸದ್ಯಕ್ಕೆ ಮಾಡಿಲ್ಲ. ಕೊರೊನಾ ಅಂಕಿ ಅಂಶಗಳನ್ನು ನೋಡಿಕೊಂಡು ಅಧಿವೇಶನದ ಕುರಿತು ಚರ್ಚೆ ನಡೆಸಿಲಾಗುವುದು ಎಂದು ತಿಳಿಸಿದರು.