ಈ ಮಾರ್ಕೇಟನ್ಯಾಗ ಮಂದಿನ,...ಮಂದಿ....!

ಈ ಮಾರ್ಕೇಟನ್ಯಾಗ ಮಂದಿನ,...ಮಂದಿ....!

ಧಾರವಾಡ: ಕೊರೊನಾ ಹಾವಳಿ ನಂತರ ಇದೇ ಮೊದಲ ಬಾರಿಗೆ ನಾಡಿನಾದ್ಯಂತ ಸಂಭ್ರಮದಿಂದ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈಗಾಗಲೇ ಮನೆ, ಮನಗಳಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. 

ನಾಳೆ ಯುಗಾದಿ ಅಮವಾಸ್ಯೆ, ನಾಡಿದ್ದು ಪಾಡ್ಯಮಿ ನಡೆಯಲಿದ್ದು, ಹಬ್ಬಕ್ಕಾಗಿ ವಿವಿಧ ವಸ್ತುಗಳನ್ನು ಖರೀದಿಸಲು ಸಾರ್ವಜನಿಕರು ಧಾರವಾಡ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರು. 

ಧಾರವಾಡದ ಹೂವಿನ ಮಾರುಕಟ್ಟೆ, ಹಣ್ಣಿನ ಮಾರುಕಟ್ಟೆ ಸೇರಿದಂತೆ ತರಕಾರಿ ಮಾರುಕಟ್ಟೆ ಜನರಿಂದ ತುಂಬಿ ತುಳುಕುತ್ತಿತ್ತು. ಸಂಜೆ ಹೊತ್ತಿಗಂತೂ ಧಾರವಾಡದ ಸುಭಾಷ ಮಾರುಕಟ್ಟೆ ಅಕ್ಷರಶಃ ಜನರಿಂದ ತುಂಬಿ ತುಳುಕುತ್ತಿತ್ತು. ಒಟ್ಟಾರೆಯಾಗಿ ಕೊರೊನಾ ನಂತರ ಇದೇ ಮೊದಲ ಬಾರಿಗೆ ಸಂಭ್ರಮದಿಂದ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತಿದೆ.