ಗುಜರಾತಿನ ಅಮ್ರೇಲಿಯಲ್ಲಿ ಭೂಕಂಪ ; ರಿಕ್ಟರ್ ಮಾಪಕದಲ್ಲಿ 3.2 ತೀವ್ರತೆ ದಾಖಲು

ಗುಜರಾತಿನ ಅಮ್ರೇಲಿಯಲ್ಲಿ ಭೂಕಂಪ ; ರಿಕ್ಟರ್ ಮಾಪಕದಲ್ಲಿ 3.2 ತೀವ್ರತೆ ದಾಖಲು

ಹಮದಾಬಾದ್: ಗುಜರಾತಿನ ಸೌರಾಷ್ಟ್ರ ಪ್ರದೇಶದ ಅಮ್ರೇಲಿ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ 3.2 ತೀವ್ರತೆಯ ಕಂಪನ ಸಂಭವಿಸಿದೆ.

ಅಮ್ರೇಲಿ ಪಟ್ಟಣದ ಆಗ್ನೇಯ-ಆಗ್ನೇಯ (ಎಸ್‌ಎಸ್‌ಇ) 43 ಕಿಮೀ ದೂರದಲ್ಲಿ ಅದರ ಕೇಂದ್ರಬಿಂದುವಿರುವ ಈ ಕಂಪನವು 3.2 ಕಿಮೀ ಆಳದಲ್ಲಿ ದಾಖಲಾಗಿದೆ ಎಂದು ಇನ್‌ಸ್ಟಿಟ್ಯೂಟ್ ಆಫ್ ಸಿಸ್ಮೋಲಾಜಿಕಲ್ ರಿಸರ್ಚ್ (ಐಎಸ್‌ಆರ್) ಮಾಹಿತಿ ನೀಡಿದೆ.

ಕಂಪನದಿಂದಾಗಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಘಟಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜ. 30 ರಂದು ಗುಜರಾತಿನ ಕಚ್ ಜಿಲ್ಲೆಯಲ್ಲಿ 4.2 ತೀವ್ರತೆಯ ಭೂಕಂಪ ದಾಖಲಾಗಿತ್ತು.ಅದರಂತೆ ಶುಕ್ರವಾರ ರಾತ್ರಿ ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ 3.2 ತೀವ್ರತೆಯ ಭೂಕಂಪ ಸಂಭವಿಸಿತ್ತು.

ಪಶ್ಚಿಮ ಉತ್ತರ ಪ್ರದೇಶದ ಸಕ್ಕರೆ ಪಟ್ಟಿಯ ಶಾಮ್ಲಿಯಲ್ಲಿ ತನ್ನ ಕೇಂದ್ರಬಿಂದುವನ್ನು ಹೊಂದಿದ್ದ ಕಂಪನವು ರಾತ್ರಿ 9.31 ಕ್ಕೆ ಈ ಪ್ರದೇಶವನ್ನು ಅಪ್ಪಳಿಸಿತು ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿತ್ತು.