ರಾಜಕೀಯವೇ ಜನಸೇವೆ ಎಂಬುದು ಈಗ ಪ್ರಧಾನಮಂತ್ರಿಗೆ ಅರಿವಾಗಿದೆ-ಸಿದ್ದರಾಮಯ್ಯ | Mysore |
ಅಧಿಕಾರ ಅಲ್ಲ ಜನ ಸೇವೆ ಮುಖ್ಯ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದು, ಮುಖ್ಯಮಂತ್ರಿ, ಪ್ರಧಾನಮಂತ್ರಿ ಆಗುವುದು ಜನ ಸೇವೆಗಾಗಿ. ಪ್ರಧಾನಮಂತ್ರಿ ಹುದ್ದೆ ಎನ್ನುವುದು ಜನಸೇವೆಗಾಗಿ ಎಂಬುದು ಅವರಿಗೆ ಈಗ ಜ್ಞಾನೋದಯವಾಗಿದೆ. ಮೈಸೂರಿನಲ್ಲಿ ಮಾತನಾಡಿದ ಅವರು, ರಾಜಕೀಯವೇ ಜನಸೇವೆ ಎಂಬುದು ಈಗ ಪ್ರಧಾನಮಂತ್ರಿಗೆ ಅರಿವಾಗಿದೆ ಎಂದು ಹೇಳಿದರು. ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ 15 ಸ್ಥಾನ ಗೆಲ್ಲುತ್ತದೆ. ಜೆಡಿಎಸ್ ಬಿಜೆಪಿಗೆ ಬೆಂಬಲ ಕೊಟ್ಟರೂ ನಮಗೆ ಏನು ತೊಂದರೆ ಆಗುವುದಿಲ್ಲ. ಮೊದಲಿಂದಲೂ ಅವರದ್ದು ಒಳ ಒಪ್ಪಂದ ನಡೆಯುತ್ತಲೇ ಇದೆ. ಅದರಲ್ಲಿ ಹೊಸತೇನು ಇಲ್ಲ ಎಂದರು