ಸಿಡಿಲು ಬಡಿದರೂ ಜಗ್ಗದ ದ್ವಾರಕಾಧೀಶ ಮಂದಿರ!: ವಿಡಿಯೋ

ಸಿಡಿಲು ಬಡಿದರೂ ಜಗ್ಗದ ದ್ವಾರಕಾಧೀಶ ಮಂದಿರ!: ವಿಡಿಯೋ

ದ್ವಾರಕಾ: ಗುಜರಾತ್‌ನ ದೇವಭೂಮಿ -ದ್ವಾರಕಾ ಜಿಲ್ಲೆಯ ವಿಶ್ವಪ್ರಸಿದ್ಧ ದ್ವಾರಕಾಧೀಶ ದೇವಾಲಯದ ಗೋಪುರದ ಮೇಲೆ ಮಂಗಳವಾರ ಸಿಡಿಲು ಬಡಿದಿದೆ. ಆ ವೇಳೆ ಗೋಪುರದ ತುತ್ತತುದಿಯಲ್ಲಿದ್ದ ಧ್ವಜ ಹರಿದು ಹೋಗಿದ್ದರೂ ದೇವಾಲಯದ ಒಳಗಿದ್ದ ಭಕ್ತರಿಗಾಗಲಿ, ದೇವಾಲಯಕ್ಕಾಗಲೀ ಯಾವ ರೀತಿಯಲ್ಲೂ ಹಾನಿಯಾಗಿಲ್ಲ.

ಭಾರಿ ಮಳೆಯ ಮಧ್ಯೆ ಸಿಡಿಲು ದೇವಾಲಯಕ್ಕೆ ಅಪ್ಪಳಿಸಿತು ಮತ್ತು ಘಟನೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮಂಗಳವಾರ ಮಧ್ಯಾಹ್ನ ಸುಮಾರು 3 ಗಂಟೆಯ ವೇಳೆಗೆ ಕಣ್ಣೆದುರಿನಲ್ಲೇ ದೇವಾಲಯಕ್ಕೆ ಸಿಡಿಲು ಅಪ್ಪಳಿಸಿತ್ತು. ದ್ವಾರಕಾಧೀಶನ ಮಂದಿರದ ಮೇಲಿನ ಧ್ವಜಕ್ಕೆ ನೇರವಾಗಿ ಸಿಡಿಲು ಅಪ್ಪಳ್ಳಿಸಿದೆ. ಆದರೆ ಯಾವಿಬ್ಬ ಭಕ್ತರಿಗೂ ಏನೂ ಹಾನಿಯಾಗಿಲ್ಲ ಅಲ್ಲದೆ ಮಂದಿರದ ಯಾವ ಭಾಗವೂ ಹಾನಿಗೊಂಡಿಲ್ಲ ಇದಾಗಿ ಅರ್ಧ ಗಂಟೆಯ ನಂತರ ಮಳೆ ಸಹ ನಿಂತಿತು. ಭಕ್ತರು ಮತ್ತೆ ಧ್ವಜವನ್ನು ದೇವಾಲಯದ ಮೇಲೆ ಏರಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು.

ಸಿಡಿಲಿನ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರುದ್ವಾರಕಾ ಜಿಲ್ಲಾಡಳಿತದೊಂದಿಗೆ ದೂರವಾಣಿ ಮಾತುಕತೆ ನಡೆಸಿದರು. ಅವರ ಲೋಕಸಭಾ ಕ್ಷೇತ್ರವಾದ ಗಾಂಧಿನಗರದಲ್ಲಿರುವ ಶಾ ಅವರ ಕಚೇರಿ ಹೊರಡಿಸಿರುವ ಹೇಳಿಕೆಯ ಪ್ರಕಾರ, ಸಿಡಿಲು ದೇವಾಲಯದ ರಚನೆಗೆ ಯಾವುದೇ ಹಾನಿ ಮಾಡಿಲ್ಲ. ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ

ಸಿಡಿಲಿನ ಅಬ್ಬರ ಬಗ್ಗೆ ತಿಳಿದುಕೊಂಡ ಶಾ ದೇವಾಲಯದ ಆಡಳಿತ ಮಂಡಳಿಯೊಂದಿಗೆ ಮತ್ತು ಜಿಲ್ಲಾಧಿಕಾರಿಯೊಂದಿಗೆ ದೂರವಾಣಿ ಮಾತುಕತೆ ನಡೆಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.