ಥಿಯೇಟರ್ ಒಳಗೆ ಹೊರಗಿನ ತಿಂಡಿ-ತಿನಿಸುಗಳಿಗೆ ನಿಷೇಧ ಹೇರಬಹುದು; ಸುಪ್ರೀಂ ಕೋರ್ಟ್

ಥಿಯೇಟರ್ ಒಳಗೆ ಹೊರಗಿನ ತಿಂಡಿ-ತಿನಿಸುಗಳಿಗೆ ನಿಷೇಧ ಹೇರಬಹುದು; ಸುಪ್ರೀಂ ಕೋರ್ಟ್

ನವದೆಹಲಿ: ಆಹಾರ ಮತ್ತು ಪಾನೀಯಗಳ ಮಾರಾಟಕ್ಕೆ ಷರತ್ತುಗಳನ್ನು ನಿಗದಿಪಡಿಸುವ ಹಕ್ಕು ಸಿನಿಮಾ ಮಂದಿರಗಳಿಗೆ ಇದೆ ಎಂದು ಸುಪ್ರೀಂ ಕೋರ್ಟ್ ಪೀಠ ತೀರ್ಪು ನೀಡಿದೆ. ಸಿನಿಮಾ ಥಿಯೇಟರ್ ಆಸ್ತಿಯು ಚಿತ್ರಮಂದಿರ ಮಾಲೀಕರ ಖಾಸಗಿ ಆಸ್ತಿ. ಸಾರ್ವಜನಿಕ ಹಿತಾಸಕ್ತಿ, ಸುರಕ್ಷತೆ & ಕಲ್ಯಾಣಕ್ಕೆ ವಿರುದ್ಧವಾಗಿಲ್ಲದಿರುವವರೆಗೆ ನಿಯಮಗಳು & ಷರತ್ತುಗಳನ್ನು ಹೇರಲು ಮಾಲೀಕರು ಅರ್ಹರಾಗಿರುತ್ತಾರೆ. ಆದರೆ ಕುಡಿಯುವ ನೀರನ್ನು ಒದಗಿಸಬೇಕು ಎಂದು ಭಾರತದ ಮುಖ್ಯ ನ್ಯಾ. ಡಿ ವೈ ಚಂದ್ರಚೂಡ್ ನ್ಯಾಯಪೀಠ ಹೇಳಿದೆ.