ಪೀಣ್ಯ ಫ್ಲೈಓವರ್‌ ಮೇಲೆ ಹೆವಿ ವೆಹಿಕಲ್‍ ಓಡಾಟಕ್ಕೆ ಬ್ರೇಕ್‌

ಪೀಣ್ಯ ಫ್ಲೈಓವರ್‌ ಮೇಲೆ ಹೆವಿ ವೆಹಿಕಲ್‍ ಓಡಾಟಕ್ಕೆ ಬ್ರೇಕ್‌

ತುಮಕೂರು : ಪೀಣ್ಯ ಫ್ಲೈಓವರ್‌ನ ತಾಂತ್ರಿಕ ಲೋಪದೋಷ ಕಂಡು ಬಂದ ಕಾರಣ ಭಾರೀ ವಾಹನ ಗಳ ಓಡಾಟಕ್ಕೆ, ಮುಂದಿನ 125 ದಿನಗಳ ಕಾಲ ನಿರ್ಬಂಧ ಹೇರಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ತುಮಕೂರು ರಸ್ತೆಯ ಗೊರಗುಂಟೆಪಾಳ್ಯ-ಪೀಣ್ಯ ಮೇಲುರಸ್ತೆಯಲ್ಲಿರುವ ಪೀಣ್ಯ ಫ್ಲೈಓವರ್‌ನ ಪಿಲ್ಲರ್‌ಗಳಿಗೆ ಕೇಬಲ್ ಅಳವಡಿಸಿದ ಬಳಿಕ ಭಾರತೀಯ ವಿಜ್ಞಾನ ಸಂಸ್ಥೆ ಭಾರಿ ವಾಹನಗಳ ಓಡಾಡಿಸಿ ತಪಾಸಣೆ ಮಾಡಿ ಸಂಚಾರಕ್ಕೆ ಗ್ರಿನ್ ಸಿಗ್ನಲ್ ನೀಡಿತ್ತು. ಈ ಬೆನ್ನಲ್ಲೆ ತಾಂತ್ರಿಕ ಲೋಪದೋಷ ಕಂಡ ಬಂದ ಕಾರಣಕ್ಕಾಗಿ ಭಾರೀ ವಾಹನಗಳಸಂಚಾರಕ್ಕೆ ಬ್ರೇಕ್‌ ಹಾಕಲಾಗಿದೆ.

ಸದಾ ಭಾರೀ ಸಂಚಾರ ದಟ್ಟಣೆ ಹೊಂದಿದ್ದ ಫ್ಲೈಓವರ್‌ನ ಎಲ್ಲಾ ಪಿಲ್ಲರ್‌ಗಳಲ್ಲಿ ಕೇಬಲ್ ಕಿತ್ತು ಹೋಗಲು ಎಲ್ಲಾ ಸಾಧ್ಯತೆಗಳಿವೆ. ಹಾಗಾಗಿ ಕೇಬಲ್ ಕಿತ್ತು ಬರುವುದಕ್ಕೂ ಮುಂಚೆಯೇ ಹೊಸ ಕೇಬಲ್‍ಗಳನ್ನು ಅಳವಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧಾರಿಸಿದೆ. ಆ ಕಾರಣದಿಂದ ತುಮಕೂರು ರಾಷ್ಟ್ರೀಯ ಹೆದ್ದಾರಿಯ ವಾಹನ ಸವಾರರಿಗೆ ಮತ್ತೆ ಸಂಚಾರ ದಟ್ದಣೆ ಕಾಡುವ ಎಲ್ಲಾ ಸಾಧ್ಯತೆಯಿದೆ. ಮುಂದಿನ ದಿನಗಳಲ್ಲಿ ಸಮಸ್ಯೆ ಪರಿಹಾರಿಸುವ ಮೂಲಕ ಬೆಂಗಳೂರು ನಗರದ ಸಂಚಾರ ದಟ್ಟಣೆಯ ನಿರ್ವಹಣೆಗೆ ಹೈಬ್ರೀಡ್‌ ಮಾದರಿಯಲ್ಲಿ ವ್ಯವಸ್ಥೆ ಕಲ್ಪಿಸಲು ಸರ್ಕಾರ ಮುಂದಾಗಲಿದೆ.