''ಸುಮಲತಾ ಬಿಜೆಪಿ ಅಸೋಸಿಯೇಟ್ ಆದರೆ ಸಂತೋಷ''

ಬೆಂಗಳೂರು: ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಅಸೋಸಿಯೇಟ್ ಆದರೆ ನಮಗೆ ಸಂತೋಷ ಎಂದು ಸಚಿವ ಡಾ.ಅಶ್ವತ್ಥ ನಾರಾಯಣ ಹೇಳಿದ್ದಾರೆ. ಈ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ನಾವೇ ಸುಮಲತಾ ಅವರಿಗೆ ಆಹ್ವಾನ ನೀಡಿದ್ವಿ. ಅವರಿಗೆ ಸ್ವಾತಂತ್ರ್ಯವಿದೆ. ಯಾವ ಪಕ್ಷಕ್ಕೆ ಆದರೂ ಬೆಂಬಲವನ್ನು ಕೊಡಬಹುದು ಎಂದಿದ್ದಾರೆ. ಸುಮಲತಾ ಬಿಜೆಪಿ ಅಸೋಸಿಯೇಟ್ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದರು.