ತೆರೆಮರೆಯಲ್ಲಿ 'ಯುವ01' ಕರಸತ್ತು ಶುರುವಾಯ್ತಾ? ಅಪ್ಪು ಹುಟ್ಟುಹಬ್ಬಕ್ಕೆ ಸರ್‌ಪ್ರೈಸ್ ಗಿಫ್ಟ್ ಲೋಡಿಂಗ್
ಯುವರಾಜ್‌ಕುಮಾರ್ ಲಾಂಚಿಂಗ್ ಸಿನಿಮಾ ಜವಾಬ್ದಾರಿಯನ್ನು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ವಹಿಸಿಕೊಂಡಿದೆ. ಯುವ ಚೊಚ್ಚಲ ಚಿತ್ರಕ್ಕೆ ಸಂತೋಷ್ ಆನಂದ್ ರಾಮ್ ಆಕ್ಷನ್ ಕಟ್ ಹೇಳುವುದು ಕನ್ಫರ್ಮ್ ಆಗಿದೆ. ಆದರೆ ಯಾವಾಗ ಸಿನಿಮಾ ಶುರುವಾಗುತ್ತದೆ ಎನ್ನುವ ಪ್ರಶ್ನೆಯನ್ನು ಅಭಿಮಾನಿಗಳು ಕೇಳುತ್ತಿದ್ದಾರೆ.
ರಾಘಣ್ಣನ ಕಿರಿಮಗ ಯುವ ರಾಜ್‌ಕುಮಾರ್ ಸಿನಿ ಆರಂಗೇಟ್ರಂ ಬಗ್ಗೆ ಬಹಳ ದಿನಗಳಿಂದ ಚರ್ಚೆ ನಡೀತಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ 'ಯುವ ರಣಧೀರ ಕಂಠೀರವ' ಆಗಿ ಬೆಳ್ಳಿ ಪರದೆಗೆ ಜಿಗಿಯಬೇಕಿತ್ತು. ಕಾರಣಾಂತರಗಳಿಂದ ಆ ಸಿನಿಮಾ ನಿಂತು ಹೋಗಿದೆ. ಇದೀಗ ಮತ್ತೊಂದು ಸಿನಿಮಾ ಮೂಲಕ ಯುವ ಚಿತ್ರರಂಗಕ್ಕೆ ಅಡಿ ಇಡಲು ಸಿದ್ಧರಾಗಿದ್ದಾರೆ. ಈಗಾಗಲೇ ಕೆಲವರು ಯುವರಾಜ್ ಅವರಲ್ಲಿ ಪುನೀತ್ ರಾಜ್‌ಕುಮಾರ್ ಅವರನ್ನು ನೋಡಲು ಶುರು ಮಾಡಿದ್ದಾರೆ. ಹಾಗಾಗಿ ಸಹಜವಾಗಿಯೇ ಈ ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ.
ಹೊಂಬಾಳೆ ಸಂಸ್ಥೆಗೆ ಸಂತೋಷ್ ಆನಂದ್ ರಾಮ್ ಈಗಾಗಲೇ 3 ಸಿನಿಮಾಗಳನ್ನು ಮಾಡಿದ್ದಾರೆ. 'ರಾಜಕುಮಾರ', 'ಯುವರತ್ನ' ಜಗ್ಗೇಶ್ ನಟನೆಯ 'ರಾಘವೇಂದ್ರ ಸ್ಟೋರ್ಸ್' ಸಿನಿಮಾ ಸಿದ್ಧವಾಗಿದೆ. 4ನೇ ಚಿತ್ರಕ್ಕೆ ಇದೀಗ ತಯಾರಿ ಶುರುವಾಗಿದೆ.
ಯುವರಾಜ್‌ಕುಮಾರ್ ಚೊಚ್ಚಲ ಚಿತ್ರಕ್ಕೆ ಇನ್ನು ಟೈಟಲ್ ಫೈನಲ್ ಆಗಿಲ್ಲ. ಆದರೆ ಸಿನಿಮಾ ಪ್ರೀ ಪ್ರೊಡಕ್ಷನ್ ವರ್ಕ್ ನಡೀತಿದೆ. ತಾಜಾ ಸಮಾಚಾರ ಏನಪ್ಪಾ ಅಂದ್ರೆ, ಸದ್ದಿಲ್ಲದೇ ಚಿತ್ರದ ಟೀಸರ್ ಶೂಟಿಂಗ್ ನಡೀತಿದೆ ಎನ್ನಲಾಗ್ತಿದೆ. ಶೋ ರೀಲ್ ರೀತಿಯಲ್ಲಿ ಸ್ಪೆಷಲ್ ಟೀಸರ್ ರಿಲೀಸ್ ಮಾಡಿ ಯುವ ಚೊಚ್ಚಲ ಚಿತ್ರಕ್ಕೆ ಚಾಲನೆ ನೀಡುವ ಪ್ರಯತ್ನದಲ್ಲಿದೆಯಂತೆ ಚಿತ್ರತಂಡ. ಟೀಸರ್ ಜೊತೆ ಟೈಟಲ್ ಅನೌನ್ಸ್ ಆದರೂ ಅಚ್ಚರಿ ಪಡಬೇಕಿಲ್ಲ. ಇನ್ನು ಚಿತ್ರತಂಡ ಅಫೀಷಿಯಲ್ ಆಗಿ ಪೋಸ್ಟರ್ ರಿವೀಲ್ ಮಾಡುವುದಕ್ಕೂ ಮೊದ್ಲೆ ಫ್ಯಾನ್‌ಮೇಡ್ ಪೋಸ್ಟರ್ಸ್ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.
ಅಪ್ಪು ಹುಟ್ಟುಹಬ್ಬಕ್ಕೆ ಟೀಸರ್
ಹೌದು ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲೇ ಯುವ ರಾಜ್‌ಕುಮಾರ್ ಚೊಚ್ಚಲ ಸಿನಿಮಾ ಸೆಟ್ಟೇರುವುದು ಬಹುತೇಕ ಖಚಿತ ಎನ್ನಲಾಗ್ತಿದೆ. ಈಗಾಗಲೇ ಅದಕ್ಕಾಗಿ ಸಕಲ ತಯಾರಿ ನಡೀತಿದೆ. ಅಂದೇ ಸ್ಪೆಷಲ್ ಟೀಸರ್ ಕೂಡ ರಿಲೀಸ್ ಆಗಲಿದೆಯಂತೆ. ಈ ಹಿಂದೆಯೇ ಸ್ಪೆಷಲ್ ಫೋಟೊಶೂಟ್ ಮಾಡಿಸಿ, ಹೊಂಬಾಳೆ ಸಂಸ್ಥೆ 'ಬೆಳ್ಳಿ ಪರದೆಗೆ ಹೊಸದೊಂದು ಪರ್ವ' ಎಂದು ಸಿನಿಮಾ ಘೋಷಿಸಿತ್ತು. ಇನ್ನು ಅಪ್ಪು ಸಮಾಧಿ ಎದುರಲ್ಲೇ 'ಯುವ01' ಚಿತ್ರಕ್ಕೆ ಚಾಲನೆ ಸಿಗುವ ಸುಳಿವು ಸಿಗುತ್ತಿದೆ.
ಜಬರ್ದಸ್ತ್ ಟೀಸರ್ ಲೋಡಿಂಗ್?
ಸದ್ಯ ಟೀಸರ್ ಶೂಟಿಂಗ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೀತಿದೆ. ಆದರೆ ಚಿತ್ರತಂಡ ಮಾತ್ರ ಈ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಡುತ್ತಿಲ್ಲ. ಇನ್ನು ಕೆಲವರ ಪ್ರಕಾರ ಟೀಸರ್ ಶೂಟಿಂಗ್ ಪ್ಲ್ಯಾನ್ ನಡೀತಿದೆ. ಆದರೆ ಇನ್ನು ಶೂಟಿಂಗ್ ಆರಂಭವಾಗಿಲ್ಲ ಎನ್ನುತ್ತಿದ್ದಾರೆ. ಒಟ್ಟಾರೆ ಯುವ ಮೊದಲ ಸಿನಿಮಾ ಸೆಟ್ಟೇರುವುದಕ್ಕು ಮೊದ್ಲೆ ಸ್ಯಾಂಡಲ್‌ವುಡ್‌ನಲ್ಲಿ ಬಝ್ ಕ್ರಿಯೇಟ್ ಮಾಡಿರುವುದು ಸುಳ್ಳಲ್ಲ.
ಕುತೂಹಲ ಕೆರಳಿಸಿದ ಸಿನಿಮಾಪುನೀತ್ ರಾಜ್‌ಕುಮಾರ್ ಜಾಗವನ್ನು ಯುವರಾಜ್‌ಕುಮಾರ್ ತುಂಬ್ತಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಒಬ್ಬ ಮಾಸ್ ಹೀರೊ ಆಗುವ ಎಲ್ಲಾ ಲಕ್ಷಣಗಳು ಯುವ ರಾಜ್‌ಕುಮಾರ್ ಅವರಲ್ಲಿ ಕಾಣುತ್ತಿದೆ. 'ಮಿ & ಮಿ ರಾಮಾಚಾರಿ', 'ರಾಜಕುಮಾರ' ರೀತಿಯ ಬ್ಲಾಕ್‌ಬಸ್ಟರ್ ಸಿನಿಮಾಗಳ ನಿರ್ದೇಶಕ ಸಂತೋಷ್ ಆನಂದ್ ರಾಮ್ ನಿರ್ದೇಶಕ, ಯಾವುದಕ್ಕೂ ರಾಜಿಯಾಗದೇ ಕೇಳಿದ್ದನ್ನೆಲ್ಲಾ ಕೊಡುವ ಹೊಂಬಾಳೆ ಸಂಸ್ಥೆ, ಇಷ್ಟು ಸಾಕಲ್ವಾ? ಸಿನಿಮಾ ನಿರೀಕ್ಷೆ ಹುಟ್ಟಾಕಲು.