ಐಪಿಎಲ್ ನಿಂದಲೂ ಹೊರಬಿದ್ದ ಕರ್ನಾಟಕದ ವೇಗಿ ಪ್ರಸಿಧ್ ಕೃಷ್ಣ

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಪರ ಆಡುವ ಕರ್ನಾಟಕದ ಬಲಗೈ ವೇಗಿ ಪ್ರಸಿಧ್ ಕೃಷ್ಣ ಅವರು ಈ ಬಾರಿಯ ಐಪಿಎಲ್ ನಲ್ಲಿ ಆಡುವುದು ಕಷ್ಟ ಎನ್ನಲಾಗಿದೆ.
ಪ್ರಸಿದ್ಧ್ ಕೃಷ್ಣ ಅವರು ಕಳೆದ ಸೆಪ್ಟೆಂಬರ್ ನಲ್ಲಿ ಬೆನ್ನುನೋವಿಗೆ ಒಳಗಾಗಿದ್ದರು, ಇದರಿಂದಾಗಿ ಅವರು ದೀರ್ಘಕಾಲದವರೆಗೆ ಆಟದಿಂದ ಹೊರಗುಳಿಯಬೇಕಾಯಿತು.
ಗುರುವಾರ 26 ವರ್ಷದ ಬಲಗೈ ವೇಗಿ ಪ್ರಸಿಧ್ ಟ್ವಿಟರ್ ನಲ್ಲಿ ತಾನು ಚೇತರಿಕೆಯ ಹಾದಿಯಲ್ಲಿದ್ದೇನೆ ಎಂದು ಹೇಳಿದ್ದಾರೆ.
ಪ್ರಸಿಧ್ ಕೃಷ್ಣ ಅವರು ಕೊನೆಯದಾಗಿ ಭಾರತ ತಂಡದ ಪರವಾಗಿ ಕಳೆದ ವರ್ಷದ ಆಗಸ್ಟ್ ನಲ್ಲಿ ಭಾರತದ ಜಿಂಬಾಬ್ವೆ ಪ್ರವಾಸದಲ್ಲಿ ಆಡಿದ್ದರು. ಒಟ್ಟಾರೆಯಾಗಿ, ಅವರು ಟೀಂ ಇಂಡಿಯಾ ಪರವಾಗಿ 14 ಏಕದಿನ ಪಂದ್ಯವಾಡಿದ್ದು 23.92 ರ ಸರಾಸರಿಯಲ್ಲಿ 25 ವಿಕೆಟ್ ಗಳನ್ನು ಗಳಿಸಿದ್ದಾರೆ.