ಇಂದು ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಸಂಸದ ರಾಹುಲ್ ಗಾಂಧಿ ಭಾಷಣ

ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಎರಡನೇ ಹಂತವು ಹರಿಯಾಣದ ಪಾಣಿಪತ್ನಿಂದ ಇಂದು ಬೆಳಗ್ಗೆ 6 ಗಂಟೆಗೆ ಪ್ರಾರಂಭವಾಗಿದೆ. ಯಾತ್ರೆ ಬೆಳಗ್ಗೆ 11 ಗಂಟೆಗೆ ಸಂಜಯ್ ಚೌಕ್ ತಲುಪಲಿದ್ದು, ಈ 13 ಕಿಲೋಮೀಟರ್ ಮಾರ್ಗವು ಸುಮಾರು 5 ಗಂಟೆಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಇಲ್ಲಿಂದ ರಾಧಾ ಸ್ವಾಮಿ ಸತ್ಸಂಗ ಭವನ ರಸ್ತೆ ಮೂಲಕ ಸೆಕ್ಟರ್ 13-17ರ ರ್ಯಾಲಿ ಸ್ಥಳಕ್ಕೆ ಹೋಗಲಾಗುತ್ತದೆ. ಅಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ.