ಬನ್ನೇರುಘಟ್ಟ ಪ್ರದೇಶದಲ್ಲಿ ಹೆದ್ದಾರಿ ಬೇಡ ಎಂಬ ಮನವಿಗೆ ನಿತಿನ್‌ ಗಡ್ಕರಿ ಒಪ್ಪಿಗೆ: ಸಿಎಂ

ಬನ್ನೇರುಘಟ್ಟ ಪ್ರದೇಶದಲ್ಲಿ ಹೆದ್ದಾರಿ ಬೇಡ ಎಂಬ ಮನವಿಗೆ ನಿತಿನ್‌ ಗಡ್ಕರಿ ಒಪ್ಪಿಗೆ: ಸಿಎಂ

ಬನ್ನೇರುಘಟ್ಟ ಪ್ರದೇಶದಲ್ಲಿ ಹೆದ್ದಾರಿ ಬೇಡವೆಂಬ ಮನವಿಗೆ ಕೇಂದ್ರ ಸಾರಿಗೆ ಸಚಿವ ನಿತಿನ್‌‌ ಗಡ್ಕರಿ ಒಪ್ಪಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಹೊರತುಪಡಿಸಿ ರೈಲ್ವೆ ಅಂಡರ್‌ ಬ್ರಿಡ್ಜ್‌‌‌‌ ನಿರ್ಮಾಣಕ್ಕೆ 100 ಕೋಟಿ ರೂ. ಕೊಡಲು ಒಪ್ಪಿದ್ದಾರೆ. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಫ್ಲೈ ಓವರ್‌‌ ನಿರ್ಮಿಸಲು ತೀರ್ಮಾನಿಸಲಾಗಿದೆ. ಬನ್ನೇರುಘಟ್ಟ ಪ್ರದೇಶದಲ್ಲಿ ಹೆದ್ದಾರಿ ಬರುವುದು ಬೇಡ ಎಂದು ಹೇಳಿದ್ದೇವೆ. ಅದನ್ನು ಒಪ್ಪಿದ್ದಾರೆ ಎಂದರು.