ಅಲ್ಲಾಹ್‌ ಪದ ಹುಟ್ಟಿದ್ದೇ ಸಂಸ್ಕೃತದಿಂದ! ಸ್ವಾಮಿ ನಿಶ್ಚಲಾನಂದ ಸರಸ್ವತಿ

ಅಲ್ಲಾಹ್‌ ಪದ ಹುಟ್ಟಿದ್ದೇ ಸಂಸ್ಕೃತದಿಂದ! ಸ್ವಾಮಿ ನಿಶ್ಚಲಾನಂದ ಸರಸ್ವತಿ

ವಾರಾಣಸಿ: “ಅಲ್ಲಾಹ್‌ ಎನ್ನುವ ಪದ ಹುಟ್ಟಿಕೊಂಡಿದ್ದೇ ಸಂಸ್ಕೃತದಿಂದ ‘ಎಂದು ವಾರಾಣಸಿ ಗೋವರ್ಧನ ಪುರಿ ಮಠದ ಮುಖ್ಯಸ್ಥರಾದ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಹೇಳಿದ್ದಾರೆ.

ಅಲ್ಲದೇ, ಈ ಪದವು ಶಕ್ತಿ ಸ್ವರೂಪದ ಸೂಚಕವಾಗಿದ್ದು, ದೇವಿ ದುರ್ಗೆಯನ್ನು ಆರಾಧಿಸಲು ಬಳಸಲಾಗುತ್ತಿತ್ತು.

ಭಾರತದ ಪ್ರತೀ ಪ್ರಜೆಯೂ ಹಿಂದೆ “ವೈದಿಕ ಆರ್ಯನ್ನರಾಗಿದ್ದರು’ ಎಂದು ಪ್ರತಿಪಾದಿಸಿದ್ದಾರೆ.

ಅಲ್ಲಾಹ್‌ ಮತ್ತು ಓಂ ಎರಡೂ ಪದಗಳು ಒಂದೇ ಎಂದು ಇತ್ತೀಚೆಗಷ್ಟೇ ಜಮೀಯತ್‌ ಮುಖ್ಯಸ್ಥ ಮೌಲಾನಾ ಸಯ್ಯದ್‌ ಅರ್ಶದ್‌ ನೀಡಿದ್ದ ಹೇಳಿಕೆಯನ್ನು ನಿಶ್ಚಲಾನಂದ ಸ್ವಾಮಿಗಳು ವಿರೋಧಿಸಿದ್ದಾರೆ.