ಬಸವರಾಜ ಬೊಮ್ಮಾಯಿ' ಅಪ್ರಸ್ತುತ ಸ್ಥಾನಮಾನದ ಸಿಎಂ : ನಟ ಚೇತನ್ ಟೀಕೆ

ಬೆಂಗಳೂರು : ಸದಾ ಒಂದಲ್ಲೊಂದು ವಿಚಾರ, ಟೀಕೆಗಳ ಮೂಲಕ ಸುದ್ದಿಯಾಗುವ ನಟ ಚೇತನ್ ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಟೀಕಿಸಿ ಸುದ್ದಿಯಾಗಿದ್ದಾರೆ.
ನಿನ್ನೆ ಫೆ.27 ರಂದು ಶಿವಮೊಗ್ಗದಲ್ಲಿ ಏರ್ ಪೋರ್ಟ್ ಉದ್ಘಾಟನೆ ಕಾರ್ಯಕ್ರಮ ನಡೆದಿದೆ.
ಟ್ವೀಟ್ ಮಾಡಿದ ಚೇತನ್
ಶಿವಮೊಗ್ಗದಲ್ಲಿ ಸಿಎಂ ಬೊಮ್ಮಾಯಿ ಬಗ್ಗೆ ಪ್ರಧಾನಿ ಮೋದಿ ಪದೇ ಪದೇ ಬಗ್ಗೆ ಪ್ರಸ್ತಾಪಿಸುತ್ತಿದ್ದರು. ಬಿಜೆಪಿಯ ಉನ್ನತ ನಾಯಕರಿಗೆ ತಿಳಿದಿದೆ: 1. ಅಧಿಕಾರವನ್ನು ಉಳಿಕೊಳ್ಳಲು ಬಿಎಸ್ವೈ ಅವರ ಲಿಂಗಾಯತ ಲಾಬಿಗಳನ್ನು ಓಲಾಯಿಸುವುದೊಂದೇ ದಾರಿ; 2. ಬೊಮ್ಮಾಯಿ ಸರ್ಕಾರ 20 ತಿಂಗಳಲ್ಲಿ ಯಾವುದೇ ಕೊಡುಗೆ ನೀಡಿಲ್ಲ. ಬೊಮ್ಮಾಯಿ ಒಬ್ಬ ಅಪ್ರಸ್ತುತ ಸ್ಥಾನ ಹೊಂದಿರುವ ಸಿಎಂ ಎಂದು ನಟ ಚೇತನ್ ಟೀಕಿಸಿದ್ದಾರೆ.