ಸಿದ್ದು-ಡಿಕೆಶಿ ಸುಮ್ಮನೆ ಕೈ ಹಿಡಿದು ಓಡಾಡ್ತಿದ್ದಾರೆ, ಇಬ್ಬರ ನಡುವೆ ಪ್ರೀತಿ ಇಲ್ಲ' : ಸಿಎಂ ಇಬ್ರಾಹಿಂ ವ್ಯಂಗ್ಯ

ಚಿಕ್ಕಮಗಳೂರು : ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಸುಮ್ಮನೆ ಕೈ ಹಿಡಿದು ಓಡಾಡ್ತಿದ್ದಾರೆ, ಅವರಿಬ್ಬರ ನಡುವೆ ಪ್ರೀತಿ ಇಲ್ಲ ಎಂದು ಸಿಎಂ ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಇಬ್ರಾಹಿಂ ಸಿದ್ದರಾಮಯ್ಯ ಮುಂದಿನ ಸಿಎಂ ಎಂದು ಡಿ.ಕೆ ಶಿವಕುಮಾರ್ ಹೇಳಲಿ ನೋಡೋಣ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಸವಾಲ್ ಹಾಕಿದ್ದಾರೆ.ಡಿಕೆಶಿ ಸಿದ್ದರಾಮಯ್ಯ ಸುಮ್ಮನೆ ಕೈ ಹಿಡಿದು ಓಡಾಡುತ್ತಿದ್ದಾರೆ.
ಸಿದ್ದರಾಮಯ್ಯ ಮುಂದಿನ ಸಿಎಂ ಎಂದು ಡಿಕೆಶಿ ಹೇಳಲಿ ಅಥವಾ ಡಿಕೆಶಿ ಮುಂದಿನ ಸಿಎಂ ಎಂದು ಸಿದ್ದರಾಮಯ್ಯ ಹೇಳಲಿ. ಕಾಂಗ್ರೆಸ್ ಬಿಜೆಪಿ ಎರಡರಲ್ಲೂ ಸಿಎಂ ಅಭ್ಯರ್ಥಿ ಬಗ್ಗೆ ಹೇಳಿಲ್ಲ ಎಂದರು.