ಯಶಸ್ವಿಯಾಗಿ 50 ದಿನ ಪೂರೈಸಿದ ‘ಕಾಂತಾರ’; ನಿಂತಿಲ್ಲ ಅಬ್ಬರ

ಕನ್ನಡದ ‘ಕಾಂತಾರ’ ಸಿನಿಮಾ ಮಾಡಿರುವ ದಾಖಲೆಗಳು ಒಂದೆರಡಲ್ಲ. ಈ ಚಿತ್ರದಿಂದ ಸ್ಯಾಂಡಲ್ವುಡ್ ಮೇಲೆ ಪರಭಾಷೆ ಮಂದಿಗೆ ಇದ್ದ ಭರವಸೆ ಜಾಸ್ತಿ ಆಗಿದೆ. ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ದೇಶಾದ್ಯಂತ ಫೇಮಸ್ ಆಗಿದ್ದಾರೆ. ಬಂಡವಾಳ ಹೂಡಿದ ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆ ಸಖತ್ ಲಾಭ ಮಾಡಿದೆ. ಜತೆಗೆ ‘ಕಾಂತಾರ’ ಚಿತ್ರ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದೆ ಎಂಬುದು ವಿಶೇಷ. ಗಲ್ಲಾಪೆಟ್ಟಿಗೆಯಲ್ಲಿ 350 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿರುವುದು ಈ ಚಿತ್ರದ ಹೆಚ್ಚುಗಾರಿಗೆ.