ವಿದ್ಯಾರ್ಥಿನಿಯನ್ನು ರ್ಯಾಗಿಂಗ್ ಮಾಡಿದ್ದ 12 ವಿದ್ಯಾರ್ಥಿಗಳಿಗೆ ಗೇಟ್ ಪಾಸ್

ವಿದ್ಯಾರ್ಥಿನಿಯನ್ನು ರ್ಯಾಗಿಂಗ್ ಮಾಡಿದ್ದ 12 ವಿದ್ಯಾರ್ಥಿಗಳಿಗೆ ಗೇಟ್ ಪಾಸ್

ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳನ್ನು ರ್ಯಾಗಿಂಗ್ ಮಾಡಿದ ಆರೋಪದ ಮೇಲೆ 12 ವಿದ್ಯಾರ್ಥಿಗಳನ್ನು ಶಿಕ್ಷಣ ಸಂಸ್ಥೆಯಿಂದ ಹೊರಹಾಕಲಾಗಿದೆ. ಶನಿವಾರ ವಿದ್ಯಾರ್ಥಿನಿಯೊಬ್ಬಳನ್ನು ರ್ಯಾಗಿಂಗ್ ಮಾಡಿದ 12 ವಿದ್ಯಾರ್ಥಿಗಳನ್ನು ಬಿನಾಯಕ್ ಆಚಾರ್ಯ ಕಾಲೇಜು ಸಂಸ್ಥೆಯಿಂದ ಹೊರಹಾಕಲು ನಿರ್ಧರಿಸಲಾಗಿತ್ತು. ರ್ಯಾಗಿಂಗ್ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸಿದ್ದು, ಅವರೆಲ್ಲರಿಗೂ TC ಪತ್ರ ನೀಡಿ ಕಾಲೇಜಿನಿಂದ ಹೊರಹಾಕಲಾಗುವುದು ಎಂದು ಕಾಲೇಜು ಪ್ರಾಂಶುಪಾಲೆ ಪ್ರಮೀಳಾ ಖಡಂಗ ತಿಳಿಸಿದ್ದಾರೆ