ಸರ್ ಎಂವಿ ನಂತರ ನಾನೇ ಇಂಜನಿಯರ್ | CHikkaballapur |
ಚಿಕ್ಕಬಳ್ಳಾಪುರ ತಾಲೂಕಿನ ಹಾರೋಬಂಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಸ್ಥಾನ ಹೊಸಹಳ್ಳಿ,ಸೊಪ್ಪಹಳ್ಳಿ ಗ್ರಾಮಗಳಲ್ಲಿ ಜನಸೇವಾ ಟ್ರಸ್ಟ್ ಅಧ್ಯಕ್ಷ ಕಾಂಗ್ರೆಸ್ ಮುಖಂಡ ಕೆ. ಎನ್. ರಘು ಪುಡ್ಕಿಟ್ ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿವೆ ನಾರಾಯಣಪುರ ಗ್ರಾಮದ ಮೂಲವಾಸಿ ನಾನು ಕಷ್ಟಪಟ್ಟು ಇಂಜನಿಯರಿಂಗ್ ಮಾಡಿಕೊಂಡಿದ್ದೇನೆ ಆ ಭಾಗದಲ್ಲಿ ಸರ್ ಎಂ ವಿಶ್ವೇಶ್ವರಯ್ಯ ನಂತರ ನಾನೇ ಇಂಜನಿಯರಿಂಗ್ ಮಾಡಿರೋ ವ್ಯಕ್ತಿಯಾಗಿದ್ದೇನೆ. ನನ್ನ ಸಮಾಜ ಸೇವೆಯ ಮೇಲೆ ಯಾರಿಗೂ ಅನುಮಾನ ಬೇಡ ಎಂದು ಹೇಳಿದ್ದಾರೆ. ಈ ವೇಳೆ ಅವರ ಪತ್ನಿ ಕಾವ್ಯಾ ರಘು, ಮಾಜಿ ಶಾಸಕ ಎಸ್ ಎಂ ಮುನಿಯಪ್ಪ, ನಂದಿ ಆಂಜನಪ್ಪ, ಜಿಲ್ಲಾ ಮಹಿಳಾ ಅಧ್ಯಕ್ಷೆ ಸುಮಿತ್ರಾ , ಮಹಿಳಾ ಮುಖಂಡೆ ಮಮತಾ ಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಂ, ಕಾರ್ಮಿಕರ ಘಟಕ ಜಿಲ್ಲಾಧ್ಯಕ್ಷ ಕೋದಂಡಪ್ಪ, ಇತರರು ಉಪಸ್ತಿತರಿದ್ದರು.