ಮಡಿಕೇರಿಯಲ್ಲಿ ಘೋರ ದುರಂತ : ನರಭಕ್ಷಕ ಹುಲಿ ದಾಳಿಗೆ ಕಾರ್ಮಿಕ ಯುವಕ ಬಲಿ

ಮಡಿಕೇರಿಯಲ್ಲಿ ಘೋರ ದುರಂತ : ನರಭಕ್ಷಕ ಹುಲಿ ದಾಳಿಗೆ ಕಾರ್ಮಿಕ ಯುವಕ ಬಲಿ

ಡಿಕೇರಿ: ಕೊಡಗು-ಕೇರಳ ಗಡಿಭಾಗವಾದ ಚೂರಿಕಾಡು ಬಳಿ ಕಾಫಿ ಕೆಲಸದಲ್ಲಿ ಮಾಡ್ತಿದ್ದ ಕಾರ್ಮಿಕನ ಮೇಲೆ ಹುಲಿಯೊಂದು ದಾಳಿ ಮಾಡಿ ಮೃತಪಟ್ಟ ಘಟನೆ ಬೆಳಕಿಗೆ ಬಂದಿಪಂಚವಳ್ಳಿ ಗ್ರಾಮದ ಕಾರ್ಮಿಕ ಚೇತನ್ (18)ಹುಲಿ ದಾಳಿಗೆ ಬಲಿಯಾದ ಯುವಕ ಎಂದು ಗುರುತಿಸಲಾಗಿದೆ. ಇದೀಗ ಮಡಿಕೇರಿ ಭಾಗದಲ್ಲಿ ಹುಲಿಗಳ ಅಟ್ಟಹಾಸ ಹೆಚ್ಚಾಗಿದ್ದು, ತೋಟದ ಮಾರ್ಗದಲ್ಲಿ ಹುಲಿಯು ಮತ್ತೆ ಪ್ರತ್ಯಕ್ಷವಾಗಿದ್ದನ್ನು ಕಂಡಿ. ಚೇತನ್‌ ತಂದೆ ಮಧು ಕಂಡು ಜೋರಾಗಿ ಕಿರುಚಿಕೊಂಡಿದ್ದಾನೆ.ಬಳಿಕ ಹುಲಿ ದಾಳಿಗೆ ತನ್ನ ಮಗ ಚೇತನ್ ಬಲಿಯಾಗಿರುವುದು ಪತ್ತೆಯಾಗಿದೆ. ಈ ಘಟನೆ ಕಂಡು ಅರಣ್ಯಾಧಿಕಾರಿಗಳಿಗೆ ಕಾಫಿ ತೋಟ ಮಾಲೀಕರಿಕೆ ಮಾಹಿತಿ ನೀಡಿದ್ದಾರೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅರಣ್ಯ ಇಲಾಖೆಯ ಎಸಿಎಫ್ ಗೋಪಾಲ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.