ಮೈಸೂರಿನಲ್ಲಿ ಡಿ.ಕೆ.ಶಿವಕುಮಾರ್ ಮುಂದಿನ ಸಿಎಂ ಆಗಲಿ ಎಂದು ದೇವಿಗೆ ಬಾಳೆಹಣ್ಣು ಸಲ್ಲಿಸಿದ ಅಭಿಮಾನಿ

ಮೈಸೂರು: ವಿಧಾನಸಭೆ ಚುನಾವಣೆ ಹತ್ರ ಬರುತ್ತಿದೆ. ಹೀಗಾಗಿ ರಾಜ್ಯದಲ್ಲಿ ಚುನಾವಣೆ ಕಾವು ಹೆಚ್ಚಾಗಿದೆ. ಈಗಾಗಲೇ ಚುನಾವಣೆಗಾಗಿ ಟಿಕೆಟ್ ಫೈಟ್ ಶುರುವಾಗಿದ್ದರೆ, ಇತ್ತ, ಕೆಲ ನಾಯಕರು ಚುನಾವಣೆ ಸ್ಪರ್ಧಿಸುವುದಾಕ್ಕಾಗಿ ಕ್ಷೇತ್ರ ಭದ್ರತೆ ಮಾಡಿಕೊಳ್ಳುತ್ತಿದ್ದಾರೆ.
ಮೊತ್ತೊಂದೆಡೆ ಇಂದು ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದು ಮತ್ತೆ ಚುನಾವಣೆ ರಣಕಹಳೆ ಊದಲಿದ್ದಾರೆ.
ಇನ್ನು ಇತ್ತೀಚೆಗೆ ಯುವಕನೊಬ್ಬ ತನ್ನಗೆ ಕನ್ಯ ಸಿಗಲಿದೆ ಎಂದು ಜಾತ್ರೆಯಲ್ಲಿ ರಥಕ್ಕೆ ಎಸೆದಿದ್ದಾರೆ. ಇದೀಗ ಮತ್ತೊಂದು ಘಟನೆ ನಡೆದಿದೆ. ಹೌದು ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಬನ್ನೂರಿನಲ್ಲಿ ನಡೆದ ಜಾತ್ರೆಯಲ್ಲಿ ಡಿ.ಕೆ.ಶಿವಕುಮಾರ್ ಮುಂದಿನ ಸಿಎಂ ಆಗಲಿ ಎಂದು ಬಾಳೆಹಣ್ಣಿನಲ್ಲಿ ಬರೆದು ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸಿದ್ದಾರೆ. ಜೊತೆಗೆ ಮುಂದಿನ ಎಂಎಲ್ಎ ಸುನೀಲ್ ಬೋಸ್ ಆಗಲಿದ್ದಾರೆ ಎಂದು ಅಭಿಮಾನಿಗಳು ಬಾಳೆಹಣ್ಣು ಮೇಲೆ ಬರೆದು ಪಾರ್ಥನೆ ಸಲ್ಲಿಸಿದ್ದಾರೆ.