ಚೀನಾದ ಸೇನೆ ಮಾಡಲಾಗದ್ದನ್ನು ನೋಟು ಅಮಾನ್ಯೀಕರಣ, ಜಿಎಸ್‌ಟಿ ಮಾಡಿದೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

ಚೀನಾದ ಸೇನೆ ಮಾಡಲಾಗದ್ದನ್ನು ನೋಟು ಅಮಾನ್ಯೀಕರಣ, ಜಿಎಸ್‌ಟಿ ಮಾಡಿದೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, 'ನೋಟು ಅಮಾನ್ಯೀಕರಣ ಮತ್ತು ದೋಷಪೂರಿತ ಜಿಎಸ್ಟಿ ಮೂಲಕ ಬಿಜೆಪಿ ಸರ್ಕಾರವು ಉದ್ಯೋಗ ಸೃಷ್ಟಿ, ಎಂಎಸ್ಎಂಇ ಮತ್ತು ಕೃಷಿ ವಲಯದ ಬೆನ್ನೆಲುಬನ್ನು ಹಾಳುಮಾಡಿದೆ' ಎಂದು ಆರೋಪಿಸಿದರು.
ಭೋಪಾಲ್: ಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯವಿರುವ ಮಾಲ್ವಾ-ನಿಮಾರ್ ಪ್ರದೇಶದ ಮೂಲಕ ನಾಲ್ಕು ದಿನಗಳ ನಡೆದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಭಾನುವಾರ ದೇಶದ ಸ್ವಚ್ಛ ನಗರ ಇಂದೋರ್ಗೆ ಆಗಮಿಸಿತು. ಈ ವೇಳೆ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, 'ನೋಟು ಅಮಾನ್ಯೀಕರಣ ಮತ್ತು ದೋಷಪೂರಿತ ಜಿಎಸ್ಟಿ ಮೂಲಕ ಬಿಜೆಪಿ ಸರ್ಕಾರವು ಉದ್ಯೋಗ ಸೃಷ್ಟಿ, ಎಂಎಸ್ಎಂಇ ಮತ್ತು ಕೃಷಿ ವಲಯದ ಬೆನ್ನೆಲುಬನ್ನು ಹಾಳುಮಾಡಿದೆ' ಎಂದು ಆರೋಪಿಸಿದರು. 'ಚೀನಾದ ಸೇನೆಯು ಭಾರತಕ್ಕೆ ಏನನ್ನು ಮಾಡಲು ಸಾಧ್ಯವಾಗಲಿಲ್ಲವೋ ಅದನ್ನು ನೋಟು ಅಮಾನ್ಯೀಕರಣ ಮತ್ತು ದೋಷಪೂರಿತ ಜಿಎಸ್ಟಿಯಿಂದ ಮಾಡಲಾಗಿದೆ. ವಿನಾಶಕಾರಿ ನೀತಿಗಳು ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳು/ಉದ್ಯಮಗಳು ಮತ್ತು ರೈತರ ಹಣದ ಹರಿವನ್ನು ಕೊನೆಗೊಳಿಸಿದೆ.

ವಾಸ್ತವವಾಗಿ ಇವರೇ ದೇಶದ ಅತಿದೊಡ್ಡ ಉದ್ಯೋಗ ಸೃಷ್ಟಿದಾರರಾಗಿದ್ದರು. ಇದರ ಪರಿಣಾಮವಾಗಿ ಉದ್ಯೋಗಗಳ ಅಂತ್ಯವಾಯಿತು. ಎಂಎಸ್ಎಂಇ, ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳು ಮತ್ತು ರೈತರನ್ನು ಪುನರುಜ್ಜೀವನಗೊಳಿಸದ ಹೊರತು, ಭಾರತದ ಯುವಕರಿಗೆ ಉದ್ಯೋಗ ಸಿಗುವುದಿಲ್ಲ' ಎಂದು ಮಾಜಿ ಕಾಂಗ್ರೆಸ್ ಅಧ್ಯಕ್ಷರು ಹೇಳಿದರು. ಇಂದೋರ್ನ ಐತಿಹಾಸಿಕ ರಾಜವಾಡ ಅರಮನೆಯಲ್ಲಿ ಭಾನುವಾರ ಸಂಜೆ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್, ಅಗತ್ಯ ವಸ್ತುಗಳ ಬೆಲೆ ಏರಿಕೆ ಬಗ್ಗೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

'ಏರುತ್ತಿರುವ ಬೆಲೆಗಳ ಹಣ ಎಲ್ಲಿಗೆ ಹೋಗುತ್ತಿದೆ, ಇದು ಹಣ ವರ್ಗಾವಣೆ ಎಂಬ ಕಾರ್ಯವಿಧಾನದ ಮೂಲಕ ಮೂವರಲ್ಲ, ಆದರೆ ಕೇವಲ ಇಬ್ಬರು ದೊಡ್ಡ ಬಿಲಿಯನೇರ್ಗಳ ಜೇಬಿಗೆ ಹೋಗುತ್ತಿದೆ' ಎಂದು ದೂರಿದರು.