ನಟ ಚೇತನ್ ವಿರುದ್ಧ ತಿರುಗಿ ಬಿದ್ದ ವಿಷ್ಣುವರ್ಧನ್ ಫ್ಯಾನ್ಸ್

ನಟ ಚೇತನ್ ವಿರುದ್ಧ ತಿರುಗಿ ಬಿದ್ದ ವಿಷ್ಣುವರ್ಧನ್ ಫ್ಯಾನ್ಸ್

ಬೆಂಗಳೂರು : ಚಲನಚಿತ್ರ ತಾರೆಯರ ಸ್ಮಾರಕಗಳಿಗೆ ಸಾರ್ವಜನಿಕರ ಭೂಮಿ, ಹಣ ಮತ್ತು ಸಂಪನ್ಮೂಲಗಳನ್ನು ಬಳಸಬಾರದು ಎಂದು ನಟ ಚೇತನ್ ಟ್ವೀಟ್ (Actor Chethan) ಮಾಡಿದ ಬೆನ್ನಲ್ಲೆ ವಿಷ್ಣುವರ್ಧನ್ ಅಭಿಮಾನಿ (Vishnuvardhan fan )ಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ

ಸದಾ ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಾಗುವ ನಟ ಚೇತನ್ ಹೇಳುತ್ತಿರುವ ಮಾತು ಸರಿಯಾಗಿಯೇ ಇರಬಹುದು. ಆದರೆ, ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ ಆಗಿರುವ ಈ ಹೊತ್ತಿನಲ್ಲಿ ಅವರ ಪ್ರತಿಕ್ರಿಯೆ ದುರುದ್ದೇಶದಿಂದ ಕೂಡಿದಂತಾಗಿದೆ ಎಂದು ಫ್ಲ್ಯಾನ್ಸ್‌ ಕೆಂಡಾಮಂಡಲರಾಗಿದ್ದಾರೆ.

ಚೇತನ್ ಚೇತನ್‌ ಅವರಿಗೆ ಕನ್ನಡ ಸಿನಿಮಾ ರಂಗದಲ್ಲಿ ಯಾವೆಲ್ಲ ನಟ, ನಟಿಯರ, ನಿರ್ಮಾಪಕರ ಸ್ಮಾರಕಗಳು ಆಗಿವೆ ಎನ್ನುವುದು ಗೊತ್ತಿದೆ. ಆಗೆಲ್ಲ ಮಾತಾಡದೇ ಇರುವವರು ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆಯಾದ ಸಂದರ್ಭದಲ್ಲಿ ಮಾತನಾಡಿದ್ದಾರೆ ಅಂದರೆ, ಆ ಮಾತಿನ ಹಿಂದಿರುವ ಉದ್ದೇಶವನ್ನೂ ಅವರು ಸ್ಪಷ್ಟ ಪಡಿಸಬೇಕು ಎಂದು ಅನೇಕ ಅಭಿಮಾನಿಗಳು ಚೇತನ್ ಪೇಜ್ ನಲ್ಲಿಯೇ ಪ್ರತಿಕ್ರಿಯೆ ನೀಡಿದ್ದಾರೆ.

ವಿಷ್ಣುಸ್ಮಾರಕ ಅನಾವರಣ ಬೆನ್ನಲ್ಲೆ ಚೇತನ್‌ ಟ್ವೀಟ್‌ ಮಾಡಿದ್ದೇನು?

ಚಲನಚಿತ್ರ ತಾರೆಯರ ಸ್ಮಾರಕಗಳಿಗೆ ಸಾರ್ವಜನಿಕರ ಭೂಮಿ, ಹಣ ಮತ್ತು ಸಂಪನ್ಮೂಲಗಳನ್ನು ಬಳಸಬಾರದು ಎಂದು ಟ್ವೀಟ್ ಮಾಡಿದ್ದಾರೆ. ಅನೇಕ ಕನ್ನಡಿಗರಂತೆ ಕೆಲಸ ಮಾಡಿ ಸಂಪಾದಿಸುವ ಚಲನಚಿತ್ರ ತಾರೆಯರು ಈಗಾಗಲೇ ಸಮಾಜದಲ್ಲಿ ಅನಗತ್ಯ ಪ್ರಚಾರವನ್ನು ಪಡೆಯುತ್ತಾರೆ ಮತ್ತು ಚಲನಚಿತ್ರಗಳ ಯಶಸ್ಸಿಗೆ ಅನಗತ್ಯ ಮನ್ನಣೆಯನ್ನು ಪಡೆಯುತ್ತಾರೆ. ಕರ್ನಾಟಕದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸುವ ವಸ್ತು ಸಂಗ್ರಹಾಲಯಗಳಿಗೆ ಸ್ಮಾರಕ ಭೂಮಿಗಳು ಒಳ್ಳೆಯ ಉಪಯೋಗಕ್ಕೆ ಬರುತ್ತವೆ' ಎಂದು ಚೇತನ್ ಪೋಸ್ಟ್ ಮಾಡಿದ್ದಾರೆ.