ಆಗಸ್ಟ್ 20ರಂದು ಬಿಡುಗಡೆಯಾಗಲಿವೆ ಈ ಮೂರು ಸಿನಿಮಾಗಳು

ಆಗಸ್ಟ್ 20ರಂದು ಬಿಡುಗಡೆಯಾಗಲಿವೆ ಈ ಮೂರು ಸಿನಿಮಾಗಳು

ದುನಿಯಾ ವಿಜಯ್ ನಿರ್ದೇಶಿಸಿ ಅಭಿನಯಿಸಿರುವ 'ಸಲಗ' ಚಿತ್ರವನ್ನು ಆಗಸ್ಟ್ 20 ವರಮಹಾಲಕ್ಷ್ಮಿ ಹಬ್ಬದ ದಿನದಂದು ಬಿಡುಗಡೆಯಾಗಲಿದೆ ಈ ಕುರಿತು 'ಸಲಗ' ಚಿತ್ರತಂಡ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿತ್ತು. ಮತ್ತೊಂದೆಡೆ ಲೂಸ್ ಮಾದ ಯೋಗಿ ನಟನೆಯ ಎಮ್.ಡಿ. ರಾಮ್ ಪ್ರಸಾದ್ ನಿರ್ದೇಶನದ ಬಹುನಿರೀಕ್ಷೆಯ 'ಲಂಕೆ' ಸಿನಿಮಾ ಕೂಡ ಅದೇ ದಿನದಂದು ತೆರೆಮೇಲೆ ಬರಲು ಸಜ್ಜಾಗಿದೆ. ಈ ಚಿತ್ರದಲ್ಲಿ ಸಂಚಾರಿ ವಿಜಯ್ ಕೂಡ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ.

ಸೂರಜ್ ಅಭಿನಯದ 'ನಿನ್ನ ಸನಿಹಕೆ' ಎಂಬ ಸಿನಿಮಾ ಕೂಡ ಆಗಸ್ಟ್ 20ರಂದೇ ರಿಲೀಸ್ ಆಗಲಿದೆ. ಈ ಮೂರು ಚಿತ್ರಗಳು ವರಮಹಾಲಕ್ಷ್ಮಿ ಹಬ್ಬದಂದು ಬಿಡುಗಡೆಯಾಗುತ್ತಿದ್ದು ಪ್ರೇಕ್ಷಕರಿಗೆ ಒಳ್ಳೆಯ ಮನರಂಜನೆ ಸಿಗಲಿದೆ. ದುನಿಯಾ ವಿಜಯ್ ಹಾಗೂ ಡಾಲಿ ಧನಂಜಯ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ 'ಸಲಗ' ಹಾಗೂ ಲೂಸ್ ಮಾದ ಯೋಗಿ ನಟನೆಯ 'ಲಂಕೆ' ಈ ಎರಡು ಚಿತ್ರಗಳು ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿವೆ.