ಕೇಂದ್ರ ನೌಕರರ ನಿವೃತ್ತಿ ವಯಸ್ಸನ್ನು 60 ವರ್ಷದಿಂದ ಇಳಿಸಲು ಹೊರಟಿರುವ ಮೋದಿ ಸರ್ಕಾರ? ಇಲ್ಲಿದೆ ಅಸಲಿ ಸತ್ಯ
ನವದೆಹಲಿ: ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸಿನ ಇಳಿಕೆಗೆ ಸಂಬಂಧಪಟ್ಟಂತೆ, ಹಿಂದಿ ಪತ್ರಿಕೆಯೊಂದರ ವರದಿಯ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರಲ್ಲಿ ಮೋದಿ ಸರ್ಕಾರ ನಿವೃತ್ತಿ ನಿಯಮಗಳನ್ನು ಬದಲಾಯಿಸಲು ಹೊರಟಿದೆ ಎಂದು ಹೇಳಲಾಗಿದೆ.
ಇದರ ಅಡಿಯಲ್ಲಿ ನೌಕರರು ಎರಡು ರೀತಿಯಲ್ಲಿ ನಿವೃತ್ತರಾಗುತ್ತಾರೆ. 60 ವರ್ಷ ವಯಸ್ಗಿಂಥ ಮುನ್ನ ಅಥವಾ 33 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ನಂತರ. ಅಂದರೆ, ಯಾರಾದರೂ 60 ವರ್ಷ ವಯಸ್ಸನ್ನು ತಲುಪಿಲ್ಲ ಅವರು ಇನ್ನೊಂಧು , ಆದರೆ 33 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದರೆ, ಅವರು ನಿವೃತ್ತರಾಗುತ್ತಾರೆ ಅಂಥ ಹೇಳಲಾಗುತ್ತಿದೆ.
. ವಾಸ್ತವವಾಗಿ ವೈರಲ್ ಆಗುತ್ತಿರುವ ಸ್ಕ್ರೀನ್‌ಶಾಟ್ 2019 ರಲ್ಲಿ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯಾಗಿದೆ. ಇದರಲ್ಲಿ ಕೇಂದ್ರ ಸರ್ಕಾರದ ನಿವೃತ್ತಿ ಯೋಜನೆಗೆ ಸಂಬಂಧಿಸಿದಂತೆ ಆಧಾರರಹಿತ ಊಹಾಪೋಹಗಳನ್ನು ಮಾಡಲಾಗಿದೆ. ದಿನಾಂಕ ಬದಲಿಸಿ ಮತ್ತೆ ಅದೇ ಸುದ್ದಿ ವೈರಲ್ ಆಗುತ್ತಿದೆ. ನಿವೃತ್ತಿ ವಯಸ್ಸಿನ ಬದಲಾವಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಅಂತಹ ಯಾವುದೇ ಯೋಜನೆ ಇಲ್ಲ.