ಸುಮಾರು ಐವತ್ತು ವರ್ಷಗಳ ನಂತರ, ಅನರ್ಹತೆಯೊಂದಿಗೆ ಅಜ್ಜಿ ಇಂದಿರಾ ಹೆಜ್ಜೆ ಅನುಸರಿಸಿದ ರಾಹುಲ್!

ಇಂದಿರಾಗಾಂಧಿ ಅವರು ಸುಪ್ರೀಂ ಕೋರ್ಟ್ನಲ್ಲಿ ತೀರ್ಪನ್ನು ಪ್ರಶ್ನಿಸಿದಾಗ, ನ್ಯಾಯಮೂರ್ತಿ ವಿಆರ್ ಕೃಷ್ಣಯ್ಯರ್ ಅವರು ಜೂನ್ 24 ರಂದು ತೀರ್ಪನ್ನು ಎತ್ತಿಹಿಡಿದರು, ನಂತರ ಜಯಪ್ರಕಾಶ್ ನಾರಾಯಣ್ ನೇತೃತ್ವದಲ್ಲಿ ಪ್ರತಿಪಕ್ಷಗಳು ಪ್ರತಿಭಟನೆಗೆ ಕರೆ ನೀಡಿ, ದೆಹಲಿಯಲ್ಲಿ ಬೃಹತ್ ರ್ಯಾಲಿ ನಡೆಸಿದವು. ಇದರಿಂದ ಆತ್ಮವಿಶ್ವಾಸ ಕಳೆದುಕೊಂಡ ಇಂದಿರಾ ಗಾಂಧಿ ಜೂನ್ 25 ರಂದು ತುರ್ತು ಪರಿಸ್ಥಿತಿಯನ್ನು ಘೋಷಿಸಲು ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಅವರನ್ನು ಪ್ರೇರೇಪಿಸಿದರು. ತುರ್ತು ಪರಿಸ್ಥಿತಿಯನ್ನು ಎರಡು ಬಾರಿ ವಿಸ್ತರಿಸಿದ ನಂತರ ಇಂದಿರಾ ಗಾಂಧಿ ಅಂತಿಮವಾಗಿ 1977 ರಲ್ಲಿ ಸಾರ್ವತ್ರಿಕ ಚುನಾವಣೆಗೆ ಕರೆ ನೀಡಿದರು. ಅವರು ಮತ್ತೆ ರಾಯ್ ಬರೇಲಿಯಿಂದ ಕಣಕ್ಕಿಳಿದರು.
ಆದರೆ ಮೊರಾರ್ಜಿ ದೇಸಾಯಿ ಸರ್ಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಅದೇ ರಾಜ್ ನಾರಾಯಣ್ ವಿರುದ್ಧ 50,000 ಮತಗಳಿಂದ ಸೋತರು. ಸದ್ಯಕ್ಕೆ ಬರುವುದಾದರೆ, ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಯಾಗಿ ಎರಡು ದಿನ ಕಳೆದರೂ ರಾಹುಲ್ ಗಾಂಧಿ ಇನ್ನೂ ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿಲ್ಲ. ಮೇಲ್ಮನವಿ ಸಲ್ಲಿಸಿದಾಗ ಅಜ್ಜಿಗಿಂತ ಭಿನ್ನವಾಗಿ ತಮ್ಮ ಅನರ್ಹತೆಯನ್ನು ರದ್ದು ಮಾಡಿಸಿಕೊಳ್ಳುತ್ತಾರೆಯೇ ಎಂಬುದನ್ನು ನೋಡಬೇಕಾಗಿದೆ.