ಕನ್ನಡ ಭವನದಲ್ಲಿ ಸಚಿವರ ಕೊಠಡಿ ವಿದ್ಯುಕ್ತ ಆರಂಭ |ಬೆಂಗಳೂರು|

ಕಲಾವಿದರ ಸಮಸ್ಯೆ ಹಾಗೂ ಅವರ ಕುಂದುಕೊರತೆಗಳನ್ನು ವಿಚಾರಿಸಲು ಇನ್ನು ಮುಂದೆ ನಿಯಮಿತ ದಿನಗಳಲ್ಲಿ ನಾನು ಕಲಾವಿದರಿಗೆ ಇಲ್ಲಿ ಲಭ್ಯವಿರುತ್ತೇನೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕøತಿ ಸಚಿವ ಬಿ ಸುನಿಲ್ ಕುಮಾರ್ ಹೇಳಿದರು.
ಅವರು ಕನ್ನಡ ಭವನದ ಮೊದಲ ಮಹಡಿಯಲ್ಲಿ ಸಚಿವರಿಗಾಗಿ ನೀಡಲಾದ ಕೊಠಡಿಯನ್ನು ಉದ್ಘಾಟಿಸಿ ಕಾರ್ಯಾರಂಭ ಮಾಡಿ ಮಾತನಾಡಿದ ಅವರು ಇನ್ನು ಮುಂದೆ ತಿಂಗಳಲ್ಲಿ ಒಂದು ದಿನ ಕಲಾವಿದರಿಗೆ ನಾನು ಸಿಗುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ರಂಗಪ್ಪ, ಲಲಿತಕಲಾ ಅಕಾಡೆಮಿಯ ಅಧ್ಯಕ್ಷ ಮಹೇಂದ್ರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರ್ದೇಶಕ ಎಸ್. ರಂಗಪ್ಪ ಹಾಜರಿದ್ದರು.