ಬಿಜೆಪಿಗೆ ಟಕ್ಕರ ನೀಡಲು ಕಾಂಗ್ರೆಸ್ ನಿಂದ ರೂಪಾ ವಡ್ಡಿನ | Dharwad |
ಅವಳಿನಗರ ಪಾಲಿಕೆ ಚುನಾವಣೆ ದಿನೆ ದಿನೇ ರಂಗ ಏರುತಿದ್ದು, ನಾಮಪತ್ರ ಸಲ್ಲಿಸಲು ಇಂದು ಕೊನೆದಿನವಾಗಿತ್ತು. ಬಿಜೆಪಿ ಅಭ್ಯರ್ಥಿಗೆ ಟಕ್ಕರ ಕೊಡಲು ವಾರ್ಡನಂಬರ್ ರಿಂದ ಕಾಂಗ್ರೆಸ್ ಅಭ್ಯರ್ಥಿ ರೂಪಾ ವಡ್ಡಿನ ಇಂದು ತಮ್ಮ ನಾಮಪತ್ರ ಸಲ್ಲಿಸಿದರು. ಕಳೆದ ಹಲವು ವರ್ಷಗಳಿಂದ ಈ ವಾಡ್೯ ಬಿಜೆಪಿ ಪಾಲವಾಗುತ್ತಿದ್ದು ಆದ್ರೆ ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ. ಇಲ್ಲಿ ಬದಲಾವಣೆ ಆದ್ರೆ ಮಾತ್ರ ಅಚ್ಚೆ ದಿನ್ ಬರಲಿದೆ ಎಂದು ಮತದಾರರಲ್ಲಿ ವಿನಂತಿಸಿಕೊಂಡರು. ಈ ಬಾರಿ ಚುನಾವಣೆಯಲ್ಲಿ ಜನ ಬದಲಾವಣೆ ಬಯಸಿದ್ದು, ಬಿಜೆಪಿ ದುರಾಡಳಿತದಿಂದ ಜನ ಬೇಸತ್ತಿದ್ದಾರೆ. ಅದ್ದರಿಂದ ಸದಾ ಜನಪರ ಕಾಳಜಿ ಹೊಂದಿರುವ ನಮ್ಮ ಕಾಂಗ್ರೆಸ್ ಅಭ್ಯರ್ಥಿ ರೂಪಾ ವಡ್ಡಿನ ಅವರಿಗೆ ಆಶೀರ್ವಾದಿಸಿಬೇಕೆಂದು ಮತದಾರರಲ್ಲಿ ಕೇಳಿಕೊಂಡರು. ಒಟ್ಟಾರೆ ಹೇಳುವುದಾದರೆ ವಾರ್ಡ ನಂಬರ್ 19ರಲ್ಲಿ ಬಿಜೆಪಿಯಿಂದ ಜ್ಯೋತಿ ವಿನಯ ಪಾಟೀಲ ಕಣದಲ್ಲಿ ಇದ್ದರೆ, ಕಾಂಗ್ರೆಸ್ ನಿಂದ ರೂಪಾ ವಡ್ಡಿನ ಕಣದಲ್ಲಿ ಇದ್ದಾರೆ. ಇಬ್ಬರ ನಡುವೆ ತೀವ್ರ ಪೈಪೋಟಿ ನಡದಿದ್ದು.ಆದ್ರೆ ಮತದಾರರ ಪ್ರಭುಗಳು ಯಾರ ಕೈ ಹಿಡಿಯಲಿದ್ದಾರೆ ಕಾದೂ ನೋಡಬೇಕಿದೆ.