ಚಿತ್ರದುರ್ಗಕ್ಕೆ ಎಂಟ್ರಿಯಾಯ್ತು 'ಬ್ಲಾಕ್ ಫಂಗಸ್'; ಚಿಕಿತ್ಸೆಗೆ ಮೊರೆಯಿಟ್ಟ ಪತ್ನಿ

ಚಿತ್ರದುರ್ಗ : ಕೋವಿಡ್ ಸೋಂಕು ನಿಯಂತ್ರಣದಲ್ಲಿರುವ ಮೊಳಕಾಲ್ಮೂರಿನ ಮೂಲಕ ಜಿಲ್ಲೆಗೆ 'ಬ್ಲಾಕ್ ಫಂಗಸ್' ಎಂಟ್ರಿಯಾಗಿದೆ. ಮೊಳಕಾಲ್ಮುರು ತಾಲ್ಲೂಕು ನಾಗಸಮುದ್ರ ಗ್ರಾಮದಲ್ಲಿ ಆತಂಕಕಾರಿ 'ಬ್ಲಾಕ್ ಫಂಗಸ್' ಪತ್ತೆಯಾಗಿದೆ. ಗ್ರಾಮದ ಮಾರುತಿ ಎಂಬುವವರು ಕಳೆದ ಹದಿನೈದು ದಿನಗಳಿಂದ ಕೋವಿಡ್‍ಗೆ ನಗರದ ಬಸಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹದಿನೈದು ದಿನಗಳ ನಂತರ ಕಣ್ಣಿನ ಎಡಭಾಗದಲ್ಲಿ ಬ್ಲಾಕ್ ಫಂಕಸ್ ಪತ್ತೆಯಾಗಿದೆ. ಈ ಕಾಯಿಲೆಗೆ ಚಿತ್ರದುರ್ಗದಲ್ಲಿ ಚಿಕಿತ್ಸೆ ದೊರೆಯದ ಕಾರಣ ಈಗ ಅವರನ್ನ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಸೆಂಟ್ಸ್ ಜಾನ್ ಮೆಡಿಕಲ್ ಕಾಲೇಜ್ ಆಸ್ಪ್ರೆತ್ರೆಗೆ ದಾಖಲಾಗಿದೆ. ಇದೀಗ ಇವರ ಚಿಕಿತ್ಸೆಗೆ ಹಣಕಾಸು ಸಮಸ್ಯೆ ಎದುರಾಗಿದೆ. ಆದ್ದರಿಂದ ಸರ್ಕಾರ ಅವರ ನೆರವಿಗೆ ಬರಬೇಕೆಂದು ಪತ್ನಿ ವೀಣಾ ಮನವಿ ಮಾಡಿದ್ದಾರೆ. ಲೈಫೋಜೋಮಲ್ ಅನ್ಪೊಟೆರಿಸಿನ್ ಬಿ ಇಂಜಕ್ಷನ್ ಸಿಗಲಾರದೇ ಸಮಸ್ಯೆಯಾಗಿದೆ. ಗುಣಮುಖರಾಗಲು 90 ವಯಿಲು ಇಂಜಕ್ಷನ್ ಅಗತ್ಯವಿದೆ ಎಂದು ಮೊಳಕಾಲ್ಮೂರು ಟಿಹೆಚ್‍ಓ ಡಾ.ಸುಧಾ ಮಾಹಿತಿ ನೀಡಿದ್ದಾರೆ.

ಚಿತ್ರದುರ್ಗಕ್ಕೆ ಎಂಟ್ರಿಯಾಯ್ತು 'ಬ್ಲಾಕ್ ಫಂಗಸ್'; ಚಿಕಿತ್ಸೆಗೆ ಮೊರೆಯಿಟ್ಟ ಪತ್ನಿ