ಎದುರಾಳಿಗಳು ಪ್ರಭಲವಾಗಿದ್ದಾರೆ, ನಾವು ಅಂಜುವುದಿಲ್ಲ : ನವನೀತ್ ಕೌರ್

ಎದುರಾಳಿಗಳು ಪ್ರಭಲವಾಗಿದ್ದಾರೆ, ನಾವು ಅಂಜುವುದಿಲ್ಲ : ನವನೀತ್ ಕೌರ್

ಬೆಂಗಳೂರು, ಜು.10- ನಮ್ಮ ಎದುರಾಳಿಗಳು ಪ್ರಭಲವಾಗಿದ್ದಾರೆ ಎಂದು ಇನ್ನೂ ಮುಂದೆ ನಾವು ಅಂಜುವುದಿಲ್ಲ. ಕಳೆದ ಕೆಲ ವರ್ಷಗಳಲ್ಲಿ ನಮ್ಮ ಮನಸ್ಥಿತಿ ಬದಲಾವಣೆಯಾಗಿದೆ ಎಂದು ಭಾರತೀಯ ಹಾಕಿ ತಂಡದ ಆಟಗಾರ್ತಿ ನವನೀತ್ ಕೌರ್ ಹೇಳಿದ್ದಾರೆ. ನಮ್ಮ ತಂಡದ ಆಟಗಾರರಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಈ ಮೊದಲೇಲ್ಲಾ ಪ್ರಬಲ ತಂಡಗಳಿದ್ದರೆ ನಾವು ಹೆದರಿಕೊಳ್ಳುತ್ತಿದ್ದೇವು.

ಗ್ರೆಟ್ ಬ್ರಿಟನ್, ನೆದರ್ ಲ್ಯಾಂಡ್ ತಂಡಗಳ ವಿರುದ್ಧ ಆಟವಾಡಿದಾಗ ನಮ್ಮಲ್ಲಿ ಅಳುಕಿದ್ದರಿಂದ ಸೋಲುಂಟಾಯಿತು. ಈಗ ಹೆದರಲು ಕಾರಣಗಳಿಲ್ಲ ಎಂದಿದ್ದಾರೆ. ಈವರೆಗೂ ಸುಮಾರು 79 ಪಂದ್ಯಗಳನ್ನಾಡಿರುವ ನವನೀತ್ ಕೌರ್ ಅವರು, ಇದೇ ಮೊದಲ ಬಾರಿಗೆ ಒಲಿಂಪಿಕ್‍ನಲ್ಲಿ ಆಡುತ್ತಿದ್ದಾರೆ. ಇದು ನನ್ನ ಬಾಲ್ಯದ ಕನಸಾಗಿತ್ತು. ನನ್ನ ದಾರಿಯಲ್ಲಿ ತಿರುಗಿ ನೋಡಿದರೆ ಅಲ್ಲಿ ಯಾವುದೇ ಕಲ್ಲುಗಳು ಉಳಿಯಲು ನಾನು ಬಿಡುವುದಿಲ್ಲ. ಸಾಕಷ್ಟು ಅನುಭವ ಮತ್ತು ಜವಾಬ್ದಾರಿಗಳೊಂದಿಗೆ ಸಿದ್ಧಳಾಗಿದ್ದೇನೆ ಎಂದು ಹೇಳಿದ್ದಾರೆ.

ನಮ್ಮ ತಂಡದ ನಡುವೆ ಸಾಕಷ್ಟು ಹೊಂದಾಣಿಕೆ ಇದೆ. ಒಂದೇ ಕುಟುಂಬದವರಂತೆ ಜವಾಬ್ದಾರಿ ನಿಭಾಯಿಸುತ್ತಿದ್ದೇವೆ. ರಾಣಿ ಮತ್ತು ಸವಿತಾ ಅವರು ಪರಸ್ಪರ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ತಂಡ ಮತ್ತಷ್ಟು ಉತ್ತಮಗೊಳ್ಳಲು ಮತ್ತು ಗುರಿ ತಲುಪಲು ಇದು ಸಹಕಾರಿಯಾಗಿದೆ ಎಂದು ಹೇಳಿದರು.