ಸೂರ್ಯನ ಸಿಡಿಲಬ್ಬರಕ್ಕೆ ಹೊಸ ವಿಶ್ವ ದಾಖಲೆ ನಿರ್ಮಾಣ
ಶ್ರೀಲಂಕಾ ವಿರುದ್ಧದ 3ನೇ T20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಭರ್ಜರಿ ಶತಕ ಸಿಡಿಸಿದ್ದರು. ಈ ಪಂದ್ಯದಲ್ಲಿ ಸೂರ್ಯ 9 ಭರ್ಜರಿ ಸಿಕ್ಸ್ & 7 ಫೋರ್ನೊಂದಿಗೆ ಅಜೇಯ 112 ರನ್ ಚಚ್ಚಿದ್ದರು. ಈ ಶತಕದೊಂದಿಗೆ ಇದೀಗ ಸೂರ್ಯಕುಮಾರ್ ಟಿ20 ಕ್ರಿಕೆಟ್ನಲ್ಲಿ ಯಾರೂ ಮಾಡದ ದಾಖಲೆ ನಿರ್ಮಿಸಿರುವುದು ವಿಶೇಷ. ಅಂದರೆ ಲಂಕಾ ವಿರುದ್ಧದ ಶತಕವು ಸೂರ್ಯ ಪಾಲಿನ 3ನೇ T20 ಶತಕವಾಗಿದೆ. ಟಿ20 ಕ್ರಿಕೆಟ್ನಲ್ಲಿ ವೇಗವಾಗಿ 1500 ರನ್ ಪೂರೈಸಿದ ವಿಶ್ವ ದಾಖಲೆಯನ್ನೂ ಕೂಡ ಸೂರ್ಯ ನಿರ್ಮಿಸಿರುವುದು ವಿಶೇಷ.