ವಿದೇಶಿ ಪ್ರವಾಸ’ದ ಬಗ್ಗೆ ಪದವಿ ಕಾಲೇಜುಗಳಿಗೆ ಮಹತ್ವದ ಸೂಚನೆ

ವಿದೇಶಿ ಪ್ರವಾಸ’ದ ಬಗ್ಗೆ ಪದವಿ ಕಾಲೇಜುಗಳಿಗೆ ಮಹತ್ವದ ಸೂಚನೆ

ಬೆಂಗಳೂರು: ರಾಜ್ಯದ ಪದವಿ ಕಾಲೇಜುಗಳ ಬೋಧಕ, ಬೋಧಕೇತರ ಸಿಬ್ಬಂದಿಗಳು ವಿದೇಶಿ ಪ್ರವಾಸ ಕೈಗೊಳ್ಳುವ ಸಂಬಂಧ ಕಾಲೇಜು ಶಿಕ್ಷಣ ಇಲಾಖೆಯಿಂದ ಮಹತ್ವದ ಸೂಚನೆಯನ್ನು ಹೊರಡಿಸಲಾಗಿದೆ. 'ವಿದೇಶಿ ಪ್ರವಾಸ ಕೈಗೊಳ್ಳುವ ಬೋಧಕ, ಬೋಧಕೇತರರುಗಳ ಪ್ರಸ್ತಾವನೆಗಳನ್ನು 2 ತಿಂಗಳ ಮುಂಚಿತವಾಗಿ ಕಾಲೇಜು ಶಿಕ್ಷಣ ಇಲಾಖೆಗೆ ಸಲ್ಲಿಸಬೇಕು. ಒಂದು ವೇಳೆ ವಿಳಂಬವಾಗಿ ಸಲ್ಲಿಸಿದ್ದಲ್ಲಿ ಶಿಫಾರಸ್ಸು ಮಾಡುವ ಪ್ರಾಧಿಕಾರವನ್ನೇ ನೇರ ಹೊಣೆಗಾರರನ್ನಾಗಿ ಮಾಡಿ, ಮುಂದಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.