ಪೊಲೀಸ್‌ ಎಂದು ಹೇಳಿ ಬಜ್ಜಿ, ಬೋಂಡಾ ತಿನ್ನಲು ಬಂದಿದ್ದ ಮಹಿಳೆ; ದೂರು ದಾಖಲು

ಪೊಲೀಸ್‌ ಎಂದು ಹೇಳಿ ಬಜ್ಜಿ, ಬೋಂಡಾ ತಿನ್ನಲು ಬಂದಿದ್ದ ಮಹಿಳೆ; ದೂರು ದಾಖಲು

ಬೆಂಗಳೂರು: ನಗರದಲ್ಲಿ ಮಹಿಳಾ ಪೊಲೀಸ್‌ ಎಂದು ಹೇಳಿ ಧಮ್ಕಿ ಹಾಕಿ ಮಹಿಳೆಯಬ್ಬಳು ಬಜ್ಜಿ ಬೊಂಡಾ ತಿಂದಿರುವ ಘಟನೆ ನಡೆದಿದೆ.

ಬೆಂಗಳೂರಿನ ಬ್ಯಾಟರಾಯನಪುರಾಯ್ಯಪ್ಪಸ್ವಾಮಿ ದೇವಸ್ಥಾನದ ಬಳಿ ಶೇಕ್ ಸಲಾಂ ಎಂಬವರು ಬಜ್ಜಿ ಅಂಗಡಿ ಇಟ್ಟುಕೊಂಡಿದ್ದರು.

ಅಲ್ಲಿಗೆ ಬಂದ ಮಹಿಳೆಯೊಬ್ಬಳು ತಾನು ಮಹಿಳಾ ಪೊಲೀಸ್ ಎಂದು ಹೇಳಿ 100 ರೂಪಾಯಿಗೆ ಬಜ್ಜಿ ತಿಂದು ಪಾರ್ಸೆಲ್ ಕೂಡ ತೆಗೆದುಕೊಂಡು ಮನೆಗೆ ಹೋಗುತ್ತಿದ್ದಳು.ವ್ಯಾಪಾರಿ ಕೂಡ ಪೊಲೀಸ್ ಎಂಬ ಭಯಕ್ಕೆ ಪ್ರತಿನಿತ್ಯ ಬಜ್ಜಿ ನೀಡುತ್ತಿದ್ದರು. ಇತ್ತೀಚೆಗೆ ಕೂಡ ಅಂಗಡಿ ಬಳಿ ಬಂದಿದ್ದ ಮಹಿಳೆ, ಹೊಟ್ಟೆ ತುಂಬಾ ಬಜ್ಜಿ ತಿಂದು ಪಾರ್ಸೆಲ್ ತೆಗೆದುಕೊಂಡಿದ್ದಾಳೆ. ಆದರೆ ವ್ಯಾಪಾರಿ ಆಕೆಗೆ 100 ರೂಪಾಯಿ ಆಗುತ್ತೆ ಎಂದಿದ್ದಾರೆ. ಈ ವೇಳೆ ವ್ಯಾಪಾರಿಗೆ ನಕಲಿ ಪೊಲೀಸ್‌ ಧಮ್ಕಿ ಹಾಕಿ, ನಾನು ಕೊಡಿಗೇಹಳ್ಳಿ ಪೊಲೀಸ್ ಬಂದಾಗಲೆಲ್ಲ ಬಜ್ಜಿ ಕೊಡಬೇಕು. ಇಲ್ಲದಿದ್ದಲ್ಲಿ ನಾಳೆಯಿಂದ ಅಂಗಡಿನ ಎತ್ತಂಗಡಿ ಮಾಡಿಸ್ತೀನಿ ಎಂದು ಅವಾಜ್ ಹಾಕಿದ್ದಾಳೆ.