ವಿಮಾನದಲ್ಲಿ ಸಹಪ್ರಯಾಣಿಕನೊಂದಿಗೆ ಹೊಡೆದಾಟಕ್ಕಿಳಿದ ಯುವಕ

ಗಗನಸಖಿಯ ಮೇಲೆ ಉಗುಳುವುದು, ಪ್ರಯಾಣಿಕರ ಮೇಲೆ ಮೂತ್ರ ಮಾಡುವುದು ಹೀಗೆ ಒಂದಿಲ್ಲಾ ಒಂದು ಅಸಭ್ಯ ಘಟನೆಗಳು ನಡೆಯುತ್ತಲೇ ಇವೆ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಬಿಮಾನ್ ಬಾಂಗ್ಲಾದೇಶ ಏರ್ವೇಸ್ನಲ್ಲಿ ಪ್ರಯಾಣಿಕನೊಬ್ಬ ಶರ್ಟ್ ಬಿಚ್ಚಿ ಸಹಪ್ರಯಾಣಿಕನ ಮೇಲೆ ಹಲ್ಲೆ ಮಾಡಿದ್ದಾನೆ. ಅಲ್ಲಿದ್ದ ಕೆಲವರು ಈತನನ್ನು ತಡೆಯಲು ಪ್ರಯತ್ನಿಸಿದರೂ ವಿಫಲವಾಗಿದೆ. ಯಾಕೆ ಈ ವ್ಯಕ್ತಿ ಹೀಗೆ ವರ್ತಿಸುತ್ತಿದ್ದಾನೆ, ಇಲ್ಲಿ ಏನು ನಡೆಯುತ್ತಿದೆ ಎಂದು ತಿಳಿದುಬಂದಿಲ್ಲ. ಸದ್ಯ ಈ ಕ್ಲಿಪ್ ವೈರಲ್ ಆಗಿದೆ.